ADVERTISEMENT

ವಾಚಕರವಾಣಿ: ಸಾಂಕೇತಿಕ ಮಹತ್ವ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 19:31 IST
Last Updated 28 ಜುಲೈ 2022, 19:31 IST

‘ಪ್ರಗತಿಗೆ ತಾಳ...’ ಲೇಖನದಲ್ಲಿ (ಪ್ರ.ವಾ., ಜುಲೈ 28) ಪಟ್ಟಿ ಮಾಡಿರುವ ಸಾಧನೆಗಳ ಪೈಕಿ ಕೆಲವಕ್ಕೆ ಸಾಂಕೇತಿಕ ಮಹತ್ವ ಮಾತ್ರ ಇದೆ. ಮಹಿಳೆಯರಿಗೆ ಪ್ರತ್ಯೇಕ ಕೃಷಿ ಪ್ರಶಸ್ತಿ ಸ್ಥಾಪನೆಯೂ ಅದರಲ್ಲಿ ಒಂದು. ಇದಕ್ಕೂ ಮೊದಲು ಕೃಷಿ ಪ್ರಶಸ್ತಿಗಳನ್ನು ಮಹಿಳೆಯರಿಗೆ ಕೊಡಬಾರದು ಎಂದೇನೂ ಇರಲಿಲ್ಲ. ಸೆಕೆಂಡರಿ ಕೃಷಿ ನಿರ್ದೇಶನಾಲಯ ಇಲ್ಲಿಯವರೆಗೆ ಕಾಣುವಂತಹ ಕೆಲಸ ಮಾಡಿಲ್ಲ. ಹೊಸ ಸಂಸ್ಥೆಗಳನ್ನು ಸ್ಥಾಪಿಸುವುದು, ಪ್ರಾರಂಭದಲ್ಲಿ ಸ್ವಲ್ಪ ಹಣ ನೀಡುವುದು ಇಷ್ಟರಿಂದಲೇ ನೈಜ ಬದಲಾವಣೆ ಅಥವಾ ಅಭಿವೃದ್ಧಿ ಆಗುವ ಸಾಧ್ಯತೆ ಕಡಿಮೆ. ಉಳಿದಿರುವ ಕೆಲವು ತಿಂಗಳುಗಳಲ್ಲಿ ನಿಷ್ಠುರ ನಿರ್ಧಾರಗಳು ಸಾಧ್ಯವೇ?

ರಾಜಕೀಯವಾಗಿ ಹೇಳಬೇಕೆಂದರೆ ಬಿಜೆಪಿಯ ವರಿಷ್ಠರಿಗೆ ಇಲ್ಲಿ ಒಂದು ಸಂಭಾವಿತ ಮುಖ ಬೇಕಾಗಿತ್ತು- ಚುನಾವಣೆ ಎದುರಿಸುವವರೆಗಾದರೂ. ವರಿಷ್ಠರ ಬೆಂಬಲ ಇರುವವರೆಗೆ ಬಸವರಾಜ ಬೊಮ್ಮಾಯಿ ಸ್ಥಿರವಾಗಿರ
ಬಲ್ಲರು.ಮುಂದಿನದನ್ನು ಪರದೆ ಮೇಲೆ ನೋಡಿಯೇ ಆನಂದಿಸಬೇಕು.

- ಎಚ್.ಎಸ್. ಮಂಜುನಾಥ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.