ADVERTISEMENT

ಜಗದ ವ್ಯಾಪಾರ ನಿಲ್ಲಲಾರದು!

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 20:06 IST
Last Updated 19 ಮಾರ್ಚ್ 2019, 20:06 IST

‘ಚುನಾವಣೆಯ ಕಾಲದ ರಾಜಕೀಯ ನಿರ್ವಾತ’ ಲೇಖನದಲ್ಲಿ (ಪ್ರ.ವಾ., ಮಾರ್ಚ್‌ 19) ನಾರಾಯಣ ಅವರು ಬಿಜೆಪಿಯ ‘ಅಪಾಯಕಾರಿ, ಯಾಂತ್ರಿಕ ದಕ್ಷತೆ’ ಮತ್ತು ಕಾಂಗ್ರೆಸ್ಸಿನ ‘ಉದಾಸೀನ, ಎಡಬಿಡಂಗಿತನ’– ಈ ಎರಡೂ ಅಪಾಯಗಳಿಂದ ಬಿಡುಗಡೆ ಅಗತ್ಯವೆಂದು ದೃಢವಾಗಿ ಪ್ರತಿಪಾದಿಸಿದ್ದಾರೆ.ಆದರೆ ಇವೆರಡೇ ಪಕ್ಷಗಳಲ್ಲದೆ ಪ್ರಾದೇಶಿಕ ಪಕ್ಷಗಳೂ ಇವೆ. ಅವು ಒಂದೊಂದೂ ಒಂದೊಂದು ದಿಕ್ಕಿನತ್ತ ಮುಖ ಮಾಡಿದ್ದರೂ ಕೇಂದ್ರದಲ್ಲಿ ಅಧಿಕಾರಗ್ರಹಣಕ್ಕಾಗಿ ಒಟ್ಟಾಗಬೇಕೆಂದುಹಾತೊರೆಯುತ್ತಿವೆ. ಈ ಪಕ್ಷಗಳೂಒಂದಿಲ್ಲೊಂದು ರೀತಿಯಲ್ಲಿ ಎರಡು ಪ್ರಮುಖ ಪಕ್ಷಗಳ ಛಾಯಾನುವರ್ತಿಗಳೇ.

ಮಧ್ಯಮವರ್ಗದ ಮತದಾರರ ಮನೋಭಾವದ ಬಗ್ಗೆ ಲೇಖಕರು ಪ್ರಸ್ತಾಪಿಸಿದ್ದಾರೆ. ಇತರರು, ಬಹುಶಃ ಸುಲಭವಾಗಿ ಆಯಾ ಸಮಯ– ಸಂದರ್ಭಕ್ಕೆ ಅನುಸಾರ ವಿಚಾರ ಮಾಡದೆ ಸ್ಪಂದಿಸುವವರು ಎಂದಿರಬಹುದು. ಈಗಿರುವ ನಿರ್ವಾತ ಸ್ಥಿತಿಯಿಂದ ದೇಶಕ್ಕೆ ಬಿಡುಗಡೆ ಹೇಗೆ? ಈ ಬಗ್ಗೆ ಲೇಖಕರ ವಿಚಾರ ಅಥವಾ ಅನಿಸಿಕೆ ಏನು ಎಂಬುದು ಲೇಖನದಲ್ಲಿ ಕಾಣಿಸದು. ‘ನಾವೀಗ ಚರಿತ್ರೆಯ ಅಂತ್ಯ (End of history) ತಲುಪಿದ್ದೇವೆ’ ಎಂದು ಅವರು ಖಚಿತ ಮಾಡಿಕೊಂಡುಬಿಟ್ಟಿದ್ದಾರೆ ಎನಿಸುತ್ತದೆ. ಆದರೆ ಜಗದ ವ್ಯಾಪಾರ ನಿಲ್ಲಲಾರದಲ್ಲ! ಹೊಸ ಚರಿತ್ರೆ ಪ್ರಾರಂಭವಾಗಬೇಕು! ಲೇಖನ ನಮ್ಮ ಮುಂದಿಡುವ ಚಿತ್ರಣವನ್ನು ನಾವು ಒಪ್ಪುವುದಾದರೆ ಮತ್ತು ಜಗತ್ತು ಮುಂದುವರಿಯುತ್ತದೆ ಎನ್ನುವುದು ನಿಶ್ಚಿತ ಎನ್ನುವ ನಂಬಿಕೆ ನಮಗಿರುವುದಾದರೆ, ಅವ್ಯವಸ್ಥೆಯು ಸುಸ್ಥಿತಿಗೆ ದಾರಿಯಾಗುತ್ತದೆ (out of chaos comes order) ಎನ್ನುವುದನ್ನು ನಂಬಬೇಕಾಗುತ್ತದೆ. ನಂಬಿಕೆ ಮುಖ್ಯ.

–ಸಾಮಗ ದತ್ತಾತ್ರಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.