ADVERTISEMENT

ಪುಸ್ತಕ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಲಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 19:31 IST
Last Updated 30 ಅಕ್ಟೋಬರ್ 2020, 19:31 IST

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಪ್ರಕ್ರಿಯೆಯಲ್ಲಿ ನೂರಾರು ಪ್ರಕಾಶಕರು ಜೆರಾಕ್ಸ್‌ ಪ್ರತಿ ನೀಡಿರುವುದನ್ನು ತಿಳಿದು (ಪ್ರ.ವಾ., ಅ. 29) ಬಲು ಬೇಜಾರಾಯಿತು. ಪುಸ್ತಕ ಆಯ್ಕೆ ಪ್ರಕ್ರಿಯೆಯು ಪಾರದರ್ಶಕ ವಾಗಿದ್ದರೆ ಲೇಖಕರು ಮತ್ತು ಪ್ರಕಾಶಕರು ಉಳಿಯಬಹುದೇನೊ.

ಪ್ರತಿವರ್ಷ ಆಯ್ಕೆಯಾಗುವ ಪುಸ್ತಕಗಳನ್ನು ಗಮನಿಸಿದರೆ, ಅದರಲ್ಲಿ ಕೆಲವು ರದ್ದಿ ಹಾಳೆಗಳಿಗಿಂತ ಕಡೆಯಾಗಿರುತ್ತವೆ. ರಂಗೋಲಿ ಕೆಳಗೆ ತೂರುವ ಕೆಲವು ಪ್ರಕಾಶಕರಿಂದಾಗಿ ಸಾಮಾನ್ಯ ಲೇಖಕ ಮೂಲೆಗುಂಪಾಗುತ್ತಾನೆ. ಪುಸ್ತಕ ಆಯ್ಕೆ ಎಂಬ ಈ ಚಕ್ರವ್ಯೂಹವನ್ನು ಆತ ಒಂಟಿಯಾಗಿ ಭೇದಿಸಲಾರ. ಪುಸ್ತಕ ಆಯ್ಕೆ ಸಮಿತಿ ಮತ್ತಷ್ಟು ಬಿಗಿ ನಿಲುವು ತಳೆದರೆ, ಇನ್ನಷ್ಟು ಪಾರದರ್ಶಕತೆಯನ್ನು ಅಳವಡಿಸಿಕೊಂಡರೆ ಸರ್ವರಿಗೂ ನ್ಯಾಯ ಸಿಗಬಹುದು.

ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.