ADVERTISEMENT

ಶಾಲಾ ಶುಲ್ಕ: ಮಧ್ಯಸ್ಥಿಕೆ ಏಕೆ?

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 19:31 IST
Last Updated 14 ಜೂನ್ 2021, 19:31 IST

ಖಾಸಗಿ ಶಾಲೆಗಳ ಶುಲ್ಕ ನಿಗದಿ ವಿಚಾರ ಕಗ್ಗಂಟಾಗಿದೆ
(ಪ್ರ.ವಾ., ಜೂನ್ 14). ಕಳೆದ ವರ್ಷದಿಂದಲೂ ಶುಲ್ಕದ ವಿಷಯದಲ್ಲಿ ಖಾಸಗಿ ಶಾಲೆಗಳ ತಕರಾರು ಹೆಚ್ಚಾಗಿ ಕೇಳಿ ಬರುತ್ತಿದೆ. ಪೋಷಕರಿಗಾಗಿ ಶಾಲೆಗಳೋ ಅಥವಾ ಶಾಲೆಗಳಿಗಾಗಿ ಪೋಷಕರೋ ಎಂದು ಕೇಳಿಕೊಳ್ಳುವಂತಾಗಿದೆ. ತಾವು ಹೇಳಿದಷ್ಟು ಶುಲ್ಕವನ್ನು ಪೋಷಕರು ಕೊಡಬೇಕು ಎಂಬುದು ಖಾಸಗಿ ಶಾಲೆಗಳ ವಾದ. ಇದು ದುಬಾರಿ ಎನಿಸಿದರೂ ಪೋಷಕರಿಗೆ ಖಾಸಗಿ ಶಾಲೆಗಳೇ ಬೇಕು.

ತಾವು ಕೇಳುವಷ್ಟು ಶುಲ್ಕವನ್ನು ಪೋಷಕರು ಕೊಡಲು ಸಿದ್ಧರಿಲ್ಲ ದಿದ್ದರೆ, ಶಾಲೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದಾದರೆ ಖಾಸಗಿ ಯವರು ಏಕೆ ಶಾಲೆ ನಡೆಸಬೇಕು? ಖಾಸಗಿ ಶಾಲೆಗಳು ಇರತಕ್ಕದ್ದು ಎಂದು ಸಂವಿಧಾನ ವಿಧಿಸಿಲ್ಲವಲ್ಲ! ಗಿರಾಕಿಗಳು ಇಲ್ಲದಿದ್ದರೆ ವ್ಯಾಪಾರಿ ಅಂಗಡಿ ತೆರೆಯುವುದಿಲ್ಲ. ತಾವು ಶಾಲೆ ನಡೆಸಬೇಕು, ತಮ್ಮ ಶಾಲೆಗೆ ಮಕ್ಕಳು ಬರಬೇಕು, ತಾವು ಕೇಳಿದಷ್ಟು ಶುಲ್ಕವನ್ನು ಪೋಷಕರು ಮರುಮಾತಿಲ್ಲದೆ ಕೊಡಬೇಕು ಎನ್ನುವ ಹಟ ಖಾಸಗಿ ಶಾಲೆಗಳವರದು. ಖಾಸಗಿ ಶಾಲೆಯಲ್ಲೇ ತನ್ನ ಮಗು ಕಲಿಯಬೇಕು ಎನ್ನುವ ಬಯಕೆ ಪೋಷಕರದು. ಹೀಗಿರುವಾಗ ಶುಲ್ಕದ ಸಮಸ್ಯೆಯನ್ನು ಪೋಷಕರು ಮತ್ತು ಸಂಬಂಧಪಟ್ಟ ಖಾಸಗಿ ಶಾಲೆಗಳು ಪರಿಹರಿಸಿಕೊಳ್ಳಲಿ. ಮಾನ್ಯತೆ ಕೊಟ್ಟ ಮಾತ್ರಕ್ಕೆ ಖಾಸಗಿ ಶಾಲೆಗಳ ಬದುಕಿನ ಹೊಣೆ ಸರ್ಕಾರದ್ದಲ್ಲ. ಶುಲ್ಕದ ವಿಷಯದಲ್ಲಿ ಸರ್ಕಾರದ ಮಧ್ಯಸ್ಥಿಕೆ ಏಕೆ?⇒

-ಸಾಮಗ ದತ್ತಾತ್ರಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.