ADVERTISEMENT

ಧ್ಯಾನ ಬೇಕು: ಯಾರಿಗೆ?

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 19:45 IST
Last Updated 4 ನವೆಂಬರ್ 2022, 19:45 IST

ಶಾಲೆಗಳಲ್ಲಿ ಮಕ್ಕಳಿಗೆ ಧ್ಯಾನ ಮಾಡಿಸಲು ಶಿಕ್ಷಣ ಸಚಿವರು ಸೂಚನೆ ನೀಡಿದ್ದಾರೆ (ಪ್ರ.ವಾ., ನ. 4). ಅರಳುವ ಹೂವುಗಳನ್ನು ಮಕ್ಕಳ ಮನಸ್ಸು ಮತ್ತು ನಗೆಯಲ್ಲಿ ಕಾಣಬಹುದು. ಅವರ ಮನಸ್ಸೇ ಧ್ಯಾನದಂತೆ ಇರುತ್ತದೆ.
ಆಟ ಪಾಠಗಳೇ ಯೋಗಾಸನದಂತೆ ಇರುತ್ತವೆ. ಅಂಥ ನಿರ್ಮಲ ಮನಸ್ಸಿನ ಮಕ್ಕಳಿಗೇಕೆ ಧ್ಯಾನ?

ಅವರಿಗೆ ಪಾಠ ಮಾಡುವ ಶಿಕ್ಷಕರು ಮತ್ತು ಪೋಷಕರು ಧ್ಯಾನಾಸಕ್ತರಾಗಿ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಶ್ರಮಿಸುವ ದಿಕ್ಕಿನಲ್ಲಿ ಸಚಿವರು ಶಾಲೆಗಳಲ್ಲಿ ಸೂಕ್ತ ಮೂಲಸೌಕರ್ಯ ಒದಗಿಸುವ ಬಗ್ಗೆ ಧ್ಯಾನಿಸಲಿ.

-ನಂಜನಹಳ್ಳಿ ನಾರಾಯಣ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.