ADVERTISEMENT

ಶಾಸಕರ ಧರಣಿ ದುರದೃಷ್ಟಕರ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 18:58 IST
Last Updated 13 ಆಗಸ್ಟ್ 2021, 18:58 IST

ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ತಾವು ಪ್ರತಿನಿಧಿಸುವ ಮೂಡಿಗೆರೆ ತಾಲ್ಲೂಕನ್ನು ಅತಿವೃಷ್ಟಿ ತಾಲ್ಲೂಕುಗಳ ಪಟ್ಟಿಗೆ ಸೇರಿಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ, ಬೆಂಗಳೂರಿನ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿ ಕಣ್ಣೀರು ಹಾಕಿದ್ದು (ಪ್ರ.ವಾ., ಆ. 13) ವಿಪರ್ಯಾಸ. ಸಚಿವ ಸ್ಥಾನ ಬೇಕು, ಇಂತಹುದೇ ಖಾತೆ ಬೇಕು ಎಂದು ಪಟ್ಟು ಹಿಡಿಯುವ ಶಾಸಕರ ಮಧ್ಯೆ, ಕ್ಷೇತ್ರದ ಹಿತಕ್ಕಾಗಿ ಧರಣಿ ಮಾಡುವ, ಕಣ್ಣೀರು ಹಾಕುವ ಇಂತಹ ಶಾಸಕರು ವಿಭಿನ್ನವಾಗಿ
ನಿಲ್ಲುತ್ತಾರೆ.

ಅಧಿಕಾರದಲ್ಲಿರುವ ಪಕ್ಷವೊಂದು ತನ್ನದೇ ಶಾಸಕನನ್ನು ಈ ಹಂತಕ್ಕೆ ದೂಡಿರುವುದು ಅದರ ನಿರ್ಲಕ್ಷ್ಯಕ್ಕೆ ಉತ್ತಮ ಉದಾಹರಣೆ. ಆಡಳಿತಪಕ್ಷದ ಶಾಸಕರೊಬ್ಬರಿಗೆ ಕಳೆದ ಎರಡು ವರ್ಷಗಳಿಂದ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಾದರೆ, ಇನ್ನು ಜನಸಾಮಾನ್ಯರ ಪಾಡು ಯಾವ ರೀತಿ ಇರಬಹುದು? ನಮ್ಮ ವ್ಯವಸ್ಥೆ ಯಾವಾಗ ಬದಲಾಗುತ್ತದೋ?

ಅಶೋಕ ಓಜಿನಹಳ್ಳಿ,ಕೊಪ್ಪಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.