ADVERTISEMENT

ಮೈಸೂರು ದಸರಾ ಪಾಸ್: ಪಾರದರ್ಶಕತೆ ಇರಲಿ!

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 20:01 IST
Last Updated 25 ಅಕ್ಟೋಬರ್ 2018, 20:01 IST
   

ಈ ಬಾರಿಯ ದಸರಾ ಮುಗಿಯಿತು. ಆದರೆ ಕೆಲವು ಪ್ರಶ್ನೆಗಳು ಉಳಿದಿವೆ. ಮೈಸೂರಿನ ಜನರು ಮತ್ತು ದೂರದ ಊರುಗಳಿಂದ ಬಂದ ಜನರಿಗೂ ದಸರಾದ ಹಲವು ಆಚರಣೆ, ಕಾರ್ಯಕ್ರಮಗಳನ್ನು ಹತ್ತಿರದಿಂದ ನೋಡುವ ಆಸೆ ಇರುತ್ತದೆ. ಅದರೆ ಪ್ರತಿ ಬಾರಿಯೂ ಅದಕ್ಕೆ ‘ಪಾಸ್’ ಎಂಬ ಬಂಧನ ಅಡ್ಡಿಯಾಗುತ್ತಿದೆ.

ಪಂಜಿನ ಕವಾಯತು, ದಸರಾ ಮೆರವಣಿಗೆ ಮುಂತಾದ ಕಾರ್ಯಕ್ರಮಗಳಿಗಾಗಿ ಸರ್ಕಾರ ಭಾರಿ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತದೆ. ಅದನ್ನು ಹತ್ತಿರದಿಂದ ನೋಡುವ ಅವಕಾಶ ನಮ್ಮಂಥ ಜನಸಾಮಾನ್ಯರಿಗೆ ಯಾಕಿಲ್ಲ? ಇವಕ್ಕೆಲ್ಲ ‘ಪಾಸ್‌’ ಎಂಬ ವ್ಯವಸ್ಥೆ ರೂಪಿಸಿದ್ದೇನೋ ಆಯಿತು, ಅವೆಲ್ಲವೂ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಅವರ ಪರಿವಾರದವರ ಕೈ ಸೇರುವುದರಿಂದ ಸಾರ್ವಜನಿಕರು ಎಲ್ಲೋ ಒಂದು ಮೂಲೆಯಲ್ಲಿ ಮುದುಡಿ ಕುಳಿತು ಕಾರ್ಯಕ್ರಮ ನೋಡಬೇಕಾದ ಸ್ಥಿತಿ ಇದೆ.

ರೈಲು, ಸಿನಿಮಾ, ಬಸ್‌... ಮುಂತಾದ ಟಿಕೆಟ್‌ಗಳನ್ನು ಕಾಯ್ದಿರಿಸಲು ಆನ್‌ಲೈನ್‌ ವ್ಯವಸ್ಥೆ ಇದೆ. ಅದರಂತೆ ದಸರಾ ಹಬ್ಬದ ಪಾಸ್‌ಗಳನ್ನು ಸಹ ಆನ್‌ಲೈನ್‌ನಲ್ಲಿ ಕಾಯ್ದಿರಿಸುವ ಅವಕಾಶ ಮಾಡಿಕೊಡುವುದು ಪಾರದರ್ಶಕ ವ್ಯವಸ್ಥೆಯಾಗುತ್ತದೆ. ಮುಂದಿನ ದಸರಾ ಸಂದರ್ಭದಲ್ಲಾದರೂ ಅಂಥ ವ್ಯವಸ್ಥೆ ಜಾರಿ ಮಾಡಿ, ಜನಸಾಮಾನ್ಯರಿಗೂ ಆಚರಣೆಗಳನ್ನು ಹತ್ತಿರದಿಂದ ನೋಡಲು ಅನುಕೂಲ ಕಲ್ಪಿಸಬೇಕು.

ADVERTISEMENT

–ದೊರೆಸ್ವಾಮಿ, ಗದ್ದೆಬಿಂಡೇನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.