ADVERTISEMENT

ಆಡಳಿತ ಪರ ಅಲೆ

ಎಸ್.ಎಸ್.ಬಾಗೇಶ್. ಶಿವಮೊಗ್ಗ
Published 23 ಮೇ 2019, 18:30 IST
Last Updated 23 ಮೇ 2019, 18:30 IST

ಚುನಾವಣೆಗಳಲ್ಲಿ ಆಡಳಿತ ವಿರೋಧಿ ಅಲೆಯಿಂದ ಸೋಲಾಗುವುದು ಸಹಜ. ಆದರೆ ಈ ಬಾರಿ ಆಡಳಿತ ಪರ ಅಲೆ ಬೀಸಿದೆ. ಆಡಳಿತ ಪಕ್ಷದವರು ತಮ್ಮ ಗೆಲುವಿಗೆ ತಂತ್ರ ಹೆಣೆದು, ಗುರಿ ಇಟ್ಟುಕೊಂಡು ಪ್ರಯತ್ನಪಟ್ಟರು.

ಕರ್ನಾಟಕದಲ್ಲೂ ಬಿಜೆಪಿ ನಾಯಕರು ‘22 ಸೀಟು ಗೆದ್ದು ದೆಹಲಿ ಗದ್ದುಗೆಗೆ ಕೊಡುಗೆ ಕೊಟ್ಟೇ ತೀರುತ್ತೇವೆ’ ಎಂದಿದ್ದರು. ಇಬ್ಬರೂ ತಮ್ಮ ಗುರಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದಾರೆ. ವಿರೋಧ ಪಕ್ಷದವರು ಮಹಾಘಟಬಂಧನ್ ಎಂದು ಬಾಯಿಮಾತಿನಲ್ಲಿ ಹೇಳಿದರೂ ಅದನ್ನು ಕಾರ್ಯರೂಪಕ್ಕೆ ತರುವ ಬದ್ಧತೆ ತೋರಲಿಲ್ಲ. ಇವರ ಆಟ ನೋಡಲಾರದೆ ದೇಶದ ಪ್ರಜೆಗಳು ಬಿಜೆಪಿ ಕಡೆ ವಾಲಿದ್ದಾರೆ. ಈ ಫಲಿತಾಂಶಕ್ಕೆ ಎಲ್ಲರೂ ತಲೆಬಾಗಲೇಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT