ADVERTISEMENT

ಚುನಾವಣೆ ವೇಳೆ ಪ್ರಶಸ್ತಿ ಘೋಷಣೆ ಸಲ್ಲ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 5:07 IST
Last Updated 3 ಏಪ್ರಿಲ್ 2021, 5:07 IST

ಚಿತ್ರರಂಗದಲ್ಲಿ ಸಲ್ಲಿಸಿದ ಅಪ್ರತಿಮ ಸೇವೆಗಾಗಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ– 2020ಕ್ಕೆ ತಮಿಳು ಚಿತ್ರರಂಗದ ಅನಭಿಷಿಕ್ತ ದೊರೆ ರಜನಿಕಾಂತ್ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಪ್ರಶಸ್ತಿಗೆ ಶ್ರೇಷ್ಠ ನಟ ರಜನಿಕಾಂತ್ ಅರ್ಹರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ತಮಿಳುನಾಡು ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪ್ರಶಸ್ತಿ ಘೋಷಿಸಿರುವ ಕೇಂದ್ರ ಸರ್ಕಾರದ ನಡೆ ನಾನಾ ಅರ್ಥಗಳಿಗೆ ಎಡೆ ಮಾಡಿದೆ. ರಜನಿಕಾಂತ್ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದರು. ನೂತನ ಪಕ್ಷ ಸ್ಥಾಪಿಸುವ ಇಂಗಿತವನ್ನೂ ವ್ಯಕ್ತಪಡಿಸಿದ್ದರು. ಆನಂತರ ಆರೋಗ್ಯದ ಕಾರಣವೊಡ್ಡಿ ಹಿಂದೆ ಸರಿದಿದ್ದರು. ಅವರು ಬಿಜೆಪಿ ಪರ ಒಲವು ಹೊಂದಿದ್ದಾರೆ ಎನ್ನುವ ವದಂತಿಯೂ ಇದೆ.

ಯಾವುದೇ ಪ್ರಶಸ್ತಿಯ ಮೌಲ್ಯ ಪ್ರಕಾಶಮಾನವಾಗಿ ಪಾರದರ್ಶಕತೆಯಿಂದ ಕಾಣಬೇಕೆಂದರೆ ಅಲ್ಲಿ ಅನುಮಾನಗಳಿಗೆ ಅವಕಾಶವೇ ಇರಬಾರದು. ಇನ್ನಾದರೂ ಕೇಂದ್ರ ಸರ್ಕಾರವು ರಾಜ್ಯಗಳಲ್ಲಿ ಚುನಾವಣೆ ನಡೆಯುವ ಸಮಯದಲ್ಲಿ ಪ್ರಶಸ್ತಿಗಳನ್ನು ಘೋಷಣೆ ಮಾಡುವ ಸಂಸ್ಕೃತಿಯನ್ನು ನಿಲ್ಲಿಸಲಿ.
-ಅನಿಲ್ ಕುಮಾರ್, ನಂಜನಗೂಡು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.