ADVERTISEMENT

ಸಾವಯವ ಇಂಗಾಲ: ಮಹತ್ವ ಅರಿವಾಗಲಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 17:24 IST
Last Updated 5 ಆಗಸ್ಟ್ 2021, 17:24 IST

ಹೆಚ್ಚು ಮಳೆ ಬೀಳುವ ಗುಡ್ಡ ಪ್ರದೇಶದಲ್ಲಿ ಹಸಿರು ಸೆರಗನ್ನು ನಾಶ ಮಾಡಿದ್ದರಿಂದ ಧರೆ ಕುಸಿದಿದೆ
(ಪ್ರ.ವಾ., ಆ. 1).ಹಸಿರು ಸೆರಗು ಇದ್ದರೆ ಬಿದ್ದ ಮಳೆ ನೀರು ನೇರವಾಗಿ ಭೂಮಿ ಮೇಲೆ ಬೀಳದೆ ಮರಗಳ ಎಲೆ ಮೇಲೆ ಬಿದ್ದು ನಿಧಾನವಾಗಿ ಭೂಮಿಗೆ ಸೇರುತ್ತಿತ್ತು. ಹಸಿರು ಸೆರಗು ನಾಶವಾಗಿದ್ದರಿಂದ ಮಳೆ ಹನಿ ನೇರವಾಗಿ ಮಣ್ಣಿಗೆ ಬಿದ್ದಿದೆ. ಮರಗಳ ನಾಶದಿಂದ ಸಾವಯವ ಇಂಗಾಲ ಕಡಿಮೆಯಾಗಿ ಮಣ್ಣು ಕುಸಿದಿದೆ.

ಒಂದು ಘನ ಮೀಟರ್ ಮಣ್ಣಿನ ತೂಕ 1,600 ಕೆ.ಜಿ. ಇದ್ದು, ಮಳೆ ನೀರಿನಿಂದ ಅದು 2 ಸಾವಿರ ಕೆ.ಜಿ.ಗೆ ಹೆಚ್ಚುತ್ತದೆ. ಆದರೆ ಮರದಿಂದ ಬೀಳುವ ಎಲೆಯು ಮಣ್ಣಿನ ಮೇಲೆ ಸ್ಪಂಜಿನ ರೀತಿ ಸಾವಯವ ಹೊದಿಕೆ ಮಾಡಿ ಮಣ್ಣಿನ ಸವಕಳಿ ನಿಲ್ಲಿಸುತ್ತದೆ. ಮಣ್ಣಿನ ತೂಕ ಕಡಿಮೆಯಾಗಿ ನೀರು ನಿಧಾನವಾಗಿ ಇಂಗುತ್ತದೆ. ಅರಣ್ಯಕ್ಕೆ ಬೆಂಕಿ ಹಾಕುವುದರಿಂದ ಮರ ಗಿಡಗಳ ಸಾವಯವ ಇಂಗಾಲ ನಾಶವಾಗಿ ಭೂಮಿ ಕುಸಿತವಾಗಿದೆ.

-ಡಾ. ಎಚ್.ಆರ್‌.ಪ್ರಕಾಶ್,ಮಂಡ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.