ADVERTISEMENT

ವಾಚಕರ ವಾಣಿ: ಬೆಳಕನ್ನು ಸಂಭ್ರಮಿಸೋಣ, ಪಟಾಕಿಯನ್ನಲ್ಲ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2022, 21:45 IST
Last Updated 19 ಅಕ್ಟೋಬರ್ 2022, 21:45 IST

ಪಟಾಕಿ ಇಲ್ಲದ ದೀಪಾವಳಿಯನ್ನು ಊಹಿಸಿಕೊಳ್ಳುವುದೇ ಕಷ್ಟ. ಬರೀ ದೀಪಗಳ ಬೆಳಗುವಿಕೆಯಿಂದ ಸುಂದರಗೊಳ್ಳುತ್ತಿದ್ದ ಸಂಜೆಗೆ ಯಾವಾಗ ಪಟಾಕಿ ತಳುಕು ಹಾಕಿಕೊಂಡಿತೋ ಗೊತ್ತಿಲ್ಲ. ಪಟಾಕಿ ಸುಟ್ಟಾಗ ಮೂಡುವ ಬೆಳಕು ಹಾಗೂ ಹೊಮ್ಮುವ ಸದ್ದು ಆ ಕ್ಷಣಕ್ಕೆ ಸಂಭ್ರಮ ಮೂಡಿಸಿದರೂ, ಆ ಬೆಳಕು ಅಡಗಿದ ಬಳಿಕ ಏಳುವ ಹೊಗೆ ಅತ್ಯಂತ ವಿಷಕಾರಿಯಾಗಿರುತ್ತದೆ.

ಪಟಾಕಿಯಲ್ಲಿರುವ ವಿವಿಧ ಬಗೆಯ ರಾಸಾಯನಿಕಗಳು ಗಾಳಿಗೆ ಸೇರಿದಾಗ ನಮ್ಮ ಉಸಿರಾಟದ ನಾಳಗಳಲ್ಲಿ ಉರಿ ತರಿಸುತ್ತವೆ, ರಕ್ತದಲ್ಲಿ ಸೇರಿ ಅದರ ಕ್ಷಮತೆಯನ್ನು ಕುಗ್ಗಿಸುತ್ತವೆ, ತನ್ಮೂಲಕ ರಕ್ತಹೀನತೆ ಎದುರಾಗುತ್ತದೆ. ನರ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತವೆ. ಇದಲ್ಲದೆ ಪಟಾಕಿಗಳಿಂದ ಆಗುವ ಅಗ್ನಿ ಅನಾಹುತ, ಶಬ್ದಮಾಲಿನ್ಯ, ವಾಯುಮಾಲಿನ್ಯ ಹಾಗೂ ಪ್ರಾಣಿಗಳಿಗೆ ಎದುರಾಗುವ ಕುತ್ತು ಅಷ್ಟಿಷ್ಟಲ್ಲ. ಪಟಾಕಿಗಳನ್ನು ಸುಡುವುದರಿಂದ ಇಷ್ಟೆಲ್ಲ ತೊಂದರೆ ಇರುವುದನ್ನು ಅರಿತು, ಈ ಬಾರಿಯ ದೀಪಾವಳಿಯಲ್ಲಿ ದೀಪಗಳನ್ನು ಮಾತ್ರ ಬೆಳಗಿಸಿ ಸಂಭ್ರಮಪಡೋಣ. ಹಾನಿಕಾರಕ ಪಟಾಕಿಗಳಿಂದ ದೂರವಿರೋಣ.

ಹರಳಹಳ್ಳಿ ಪುಟ್ಟರಾಜು,ಪಾಂಡವಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.