ADVERTISEMENT

ವಾಚಕರ ವಾಣಿ: ಉಚಿತ ಶಿಕ್ಷಣ- ಸರ್ಕಾರದ ಹೊಣೆಗಾರಿಕೆ ಏನು?

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 22:45 IST
Last Updated 21 ಅಕ್ಟೋಬರ್ 2022, 22:45 IST

ಸರ್ಕಾರಿ ಶಾಲೆಯ ಮಕ್ಕಳ ಪೋಷಕರ ಹೆಗಲಿಗೆ ಶಾಲೆಯ ನಿರ್ವಹಣೆಯ ಖರ್ಚುವೆಚ್ಚಗಳ ಹೊಣೆ ವಹಿಸಲು ಸರ್ಕಾರ ಮುಂದಾಗಿರುವುದನ್ನು ತಿಳಿದು ಬೇಸರವಾಯಿತು. ಇಂತಹ ಅಸೂಕ್ಷ್ಮ ನಿರ್ಧಾರಗಳು ಪದೇ ಪದೇ ಆಗುತ್ತಿರುವುದನ್ನು ನೋಡಿದರೆ, ಸರ್ಕಾರಿ ಶಾಲೆಗಳನ್ನು ಮುಚ್ಚಲೇಬೇಕೆಂದು ಅಧಿಕಾರಿ ವರ್ಗ ಮತ್ತು ರಾಜಕಾರಣಿಗಳು ಶಪಥ ಮಾಡಿದಂತಿದೆ ಎಂದು ಅನ್ನಿಸುತ್ತದೆ. ಮಗು ಒಂದು ನೋಟ್‌ಪುಸ್ತಕ ಕೇಳಿದರೆ ಶಾಲೆಗೆ ಬಂದು ಶಿಕ್ಷಕರ ಜೊತೆ ಜಗಳ ಮಾಡುವ ಪೋಷಕರಿರುವಾಗ, ಅಂಥವರು ತಿಂಗಳಿಗೆ 100 ರೂಪಾಯಿ ಕೊಟ್ಟು ಮಕ್ಕಳನ್ನು ಶಾಲೆಗೆ ಕಳಿಸುವರೇ?

ಪೋಷಕರು ಹಣ ಕೊಟ್ಟು ಮಗುವನ್ನು ಸರ್ಕಾರಿ ಶಾಲೆಗೆ ಕಳಿಸುವುದಾದರೆ ಸಂವಿಧಾನದ ಆಶಯವಾದ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವಲ್ಲಿ ಸರ್ಕಾರದ ಹೊಣೆಗಾರಿಕೆ ಏನು? ನಗರಗಳ ಕೊಳೆಗೇರಿಗಳು ಮತ್ತು ಗ್ರಾಮೀಣ ಬಡವರ ಮಕ್ಕಳು ಉಚಿತ ಶಿಕ್ಷಣದಿಂದ ದೂರ ಉಳಿಯಬೇಕೆ?

ಹಡವನಹಳ್ಳಿ ವೀರಣ್ಣಗೌಡ, ತುಮಕೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.