ADVERTISEMENT

ವಾಚಕರ ವಾಣಿ: ಮತ್ತೊಂದು ಪಕ್ಷದ ಉಸಾಬರಿ ಏಕೆ?

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 23:15 IST
Last Updated 20 ಅಕ್ಟೋಬರ್ 2022, 23:15 IST

‘ಪಕ್ಷ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದಾಗ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೊಟ್ಟಿದ್ದರೆ ನಾವೂ ಒಪ್ಪಿಕೊಳ್ಳುತ್ತಿದ್ದೆವು. ಇಂಥ ಸ್ಥಿತಿಯಲ್ಲಿ ನಾವು ಒಪ್ಪಿಕೊಳ್ಳುವುದಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅದು, ಇನ್ನೊಂದು ಪಕ್ಷಕ್ಕೆ ಸಂಬಂಧಿಸಿದ ವಿಚಾರ. ಇವರಿಗೆ ಆ ಉಸಾಬರಿ ಏಕೆ!? ಇವರು ಒಪ್ಪಿದರೆಷ್ಟು, ಬಿಟ್ಟರೆಷ್ಟು?

ವಿರೋಧ ಪಕ್ಷದ ಒಂದು ಉನ್ನತ ಸ್ಥಾನವು ಕರ್ನಾಟಕದ ಒಬ್ಬ ನಾಯಕನಿಗೆ ಸಿಕ್ಕಿದಾಗ, ಮುಖ್ಯಮಂತ್ರಿಯಾಗಿ ಔಪಚಾರಿಕವಾಗಿ ಅವರನ್ನು ಅಭಿನಂದಿಸುವುದು ಇವರ ಘನತೆ, ಗೌರವವನ್ನು ಹೆಚ್ಚಿಸುವ ವಿಷಯ. ಆ ಕೆಲಸವನ್ನು ಈ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಮಾಡಿದ್ದಾರೆ. ಬೊಮ್ಮಾಯಿ ಅವರಿಗೆ ಆ ರೀತಿ ಮಾಡುವುದು ಅಪಥ್ಯವೆನಿಸಿದ್ದರೆ ಸುಮ್ಮನಿದ್ದು ಬಿಡಬಹುದಿತ್ತು.

ಚಾವಲ್ಮನೆ ಸುರೇಶ್ ನಾಯಕ್,ಹಾಲ್ಮತ್ತೂರ್, ಕೊಪ್ಪ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.