ADVERTISEMENT

ವಾಚಕರ ವಾಣಿ | ಇಬ್ಬರ ಜಗಳ ಜಗತ್ತಿಗೇ ನಷ್ಟ!

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 21:10 IST
Last Updated 18 ಮಾರ್ಚ್ 2022, 21:10 IST

ಕೆಲವೇ ದಿನಗಳ ಹಿಂದೆ ಕಟ್ಟಡ ನಿರ್ಮಾಣದ ಉಕ್ಕು ಪ್ರತೀ ಟನ್‌ಗೆ ₹ 60 ಸಾವಿರದಿಂದ 65 ಸಾವಿರ ಇದ್ದದ್ದು ಈಗ ₹ 80 ಸಾವಿರದಿಂದ 85 ಸಾವಿರಕ್ಕೆ ಏರಿದೆ. ಅಂದರೆ ಸರಿಸುಮಾರು ₹ 20 ಸಾವಿರದಷ್ಟು ಭಾರಿ ಪ್ರಮಾಣದ ಏರಿಕೆ. ಈ ಏರಿಕೆಗೆ ಅಂಗಡಿಯವರು ಹೇಳುವ ಕಾರಣ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ.

ಆದರೆ ಅದಕ್ಕೂ ಬೆಲೆ ಏರಿಕೆಗೂ ಯಾವುದೇ ನೇರ ಸಂಬಂಧವಿಲ್ಲ ಎಂಬುದು ಜನಸಾಮಾನ್ಯರಿಗೂ ತಿಳಿದ ವಿಚಾರ. ಭಾರತದಲ್ಲಿ ಇಂಧನದ ಬೆಲೆ ಕೂಡಾ ಸ್ಥಿರವಾಗಿದ್ದು ಉಕ್ಕಿನ ಬೆಲೆ ಏರಲು ಕಾರಣವೇ ಇಲ್ಲ. ಇದರೊಟ್ಟಿಗೆ ಸಿಮೆಂಟು ಮತ್ತು ಇತರ ಸಾಮಗ್ರಿಗಳೂ ನಾವೇನು ಕಡಿಮೆ ಎಂಬಂತೆ ಮೇಲೇರಿ ಕೂತಿವೆ. ಸಕಾರಣವಿಲ್ಲದೆ ಈ ಪಾಟಿ ಬೆಲೆ ಏರಿಕೆಯು ವ್ಯಾಪಾರಿಗಳ ಕುತಂತ್ರವೇ ಹೌದು. ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ನಿಯಂತ್ರಣಕ್ಕೆ ತಾರದಿದ್ದಲ್ಲಿ ಜನಸಾಮಾನ್ಯರು ಹೈರಾಣಾಗುವುದರಲ್ಲಿ ಸಂದೇಹವೇ ಇಲ್ಲ. ಈಗಾಗಲೇ ಕಟ್ಟಡದ ಗುತ್ತಿಗೆ ದಾರರು ಮತ್ತು ಮಾಲೀಕರ ನಡುವೆ ವೈಮನಸ್ಯ ಉಂಟಾಗಿ ಕೆಲಸಗಳು ನಿಂತುಹೋಗಿವೆ. ಸರ್ಕಾರಿ ಕೆಲಸಗಳ ಗುತ್ತಿಗೆದಾರರೂ ಕಣ್ಣುಕಣ್ಣು ಬಿಡುವಂತಾಗಿದೆ. ಈ ರೀತಿಯ ಅನವಶ್ಯಕ ಬೆಲೆ ಏರಿಕೆಗೆ ಕಡಿವಾಣ ಹಾಕಿ ಜನರಿಗೆ ನೆಮ್ಮದಿ ಮೂಡಿಸಲಿ. ಜನರ ಸ್ವಂತ ಸೂರಿನ ಕನಸು ಕಮರದಿರಲಿ. ‘ಇಬ್ಬರ ಜಗಳ ಮೂರನೆಯವರಿಗೆ ಲಾಭ’ ಎಂಬ ಗಾದೆ ಈಗ ‘ಎರಡು ದೇಶಗಳ ನಡುವಿನ ಯುದ್ಧ, ಜಗತ್ತಿಗೆಲ್ಲಾ ನಷ್ಟ’ ಎಂಬಂತಾಗಿದೆ.

-ಪತ್ತಂಗಿ ಎಸ್. ಮುರಳಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.