ADVERTISEMENT

ನಾಡು–ನುಡಿಯ ಸಂಕಟ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 4 ಫೆಬ್ರುವರಿ 2020, 14:35 IST
Last Updated 4 ಫೆಬ್ರುವರಿ 2020, 14:35 IST

598 ಕನ್ನಡ ಶಾಲೆಗಳಲ್ಲಿ ಶೂನ್ಯ ದಾಖಲಾತಿ, ಕಲಬುರ್ಗಿಯಲ್ಲಿ ನುಡಿ ಜಾತ್ರೆಯ ಸಂಭ್ರಮ, ಸಿದ್ಧಲಿಂಗಯ್ಯ ಅವರಿಗೆ ಪ್ರತಿಷ್ಠಿತ ಪಂಪ ಪ್ರಶಸ್ತಿ... ಹೀಗೆ ಕನ್ನಡ ನುಡಿಗೆ ಸಂಬಂಧಿಸಿದಂತೆ ವೈರುಧ್ಯದ ವರದಿಗಳು ಪ್ರಕಟ
ವಾಗಿವೆ (ಪ್ರ.ವಾ., ಫೆ. 4). ಕನ್ನಡ ಮಾಧ್ಯಮಕ್ಕೆ ದಾಖಲಾಗುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿ, ಇಂಗ್ಲಿಷ್‌ ಮಾಧ್ಯಮಕ್ಕೆ ದಾಖಲಾಗುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಶಾಲೆಗಳಲ್ಲಿ ಕನ್ನಡ
ಕಲಿಕೆ ಕುಂಠಿತಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಶಾಲೆಗಳಲ್ಲಿ ಉಳಿಯದ ಕನ್ನಡವನ್ನು ಸಮ್ಮೇಳನ, ಸಮಾರಂಭಗಳ ಮೂಲಕ ಉಳಿಸಿಕೊಳ್ಳಲಾಗದು.

ಸರ್ಕಾರಿ ಶಾಲೆಗಳ ಗುಣಾತ್ಮಕ ಸುಧಾರಣೆ ಒಂದು ಕಡೆ ಆದರೆ, ಕನ್ನಡ ಮಾಧ್ಯಮದಲ್ಲಿ ಕನಿಷ್ಠ ಹತ್ತನೇ
ತರಗತಿವರೆಗಿನ ಓದನ್ನು ರಾಜ್ಯ ಸರ್ಕಾರದ ಎಲ್ಲ ಹುದ್ದೆಗಳಿಗೆ ಕಡ್ಡಾಯಗೊಳಿಸುವುದು ಈ ದಿಸೆಯಲ್ಲಿ ಮಹತ್ವದ ಹೆಜ್ಜೆ ಆಗಬಹುದು. ಕನ್ನಡವನ್ನು ಅನ್ನದ ಭಾಷೆ ಮಾಡುವ ದಿಸೆಯಲ್ಲಿ ಇದು ದಿಟ್ಟ ಕ್ರಮ ಕೂಡ ಆಗುತ್ತದೆ. ಹಾಗೆಯೇ ರಾಜ್ಯದ ಎಲ್ಲ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ರಾಜ್ಯಭಾಷೆಯನ್ನು ಪ್ರಥಮ ಭಾಷೆಯಾಗಿ ಬೋಧಿಸುವುದು ಕೂಡ ರಾಜ್ಯ ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಅವಶ್ಯಕ. ಸಾಹಿತ್ಯ ಸಮ್ಮೇಳನ ಈ ಕುರಿತು ಸರ್ಕಾರವನ್ನು ಒತ್ತಾಯಿಸಲಿ.

ವೆಂಕಟೇಶ ಮಾಚಕನೂರ, ಧಾರವಾಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.