ADVERTISEMENT

ಆಗ ಶಿಸ್ತುಕ್ರಮ ಕೈಗೊಳ್ಳಲಿಲ್ಲವೇಕೆ?

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 15:01 IST
Last Updated 15 ಏಪ್ರಿಲ್ 2022, 15:01 IST

‘ಹಿರಿಯ ರಾಜಕಾರಣಿಯಾಗಿರುವ ನನ್ನನ್ನೂ ಇಂದಿಗೂ ದೇವಸ್ಥಾನದ ಒಳಗೆ ಸೇರಿಸುವುದಿಲ್ಲ’ ಎಂಬ ಕಾಂಗ್ರೆಸ್‌ನ ಹಿರಿಯ ನಾಯಕ ಡಾ. ಜಿ.ಪರಮೇಶ್ವರ ಅವರ ಮಾತು ಯಾರಿಗಾದರೂ ನೋವು ತರುವಂತಹದ್ದು. ಸಮಾನತೆಯ ಹರಿಕಾರರ ಜಯಂತಿಗಳನ್ನು ಸರ್ಕಾರಿ ಕಾರ್ಯಕ್ರಮಗಳನ್ನಾಗಿ ನಾವೆಲ್ಲರೂ ಕೂಡಿ ಅದ್ಧೂರಿಯಾಗಿ ಆಚರಿಸುತ್ತೇವೆ. ಆದರೆ ಅವರ ತತ್ವ, ಆದರ್ಶಗಳನ್ನು ಮಾತ್ರ ವಕ್ರದೃಷ್ಟಿಯಿಂದ ನೋಡುತ್ತೇವೆ.

ಸಮಾಜದ ನಡವಳಿಕೆಗಳನ್ನು ಸರಿಮಾಡಲು, ಸಂವಿಧಾನದ ಆಶಯಗಳನ್ನು ಜಾರಿಗೆ ತರಲು ಪರಮೇಶ್ವರ ಅವರು ಅಧಿಕಾರದಲ್ಲಿದ್ದಾಗ ಏಕೆ ಪ್ರಯತ್ನಿಸಲಿಲ್ಲ ಎಂಬುದು ಸಹ ಅಷ್ಟೇ ಪ್ರಮುಖವಾದ ವಿಚಾರ. ಯಾವ ದೇವಸ್ಥಾನಗಳು ತಮ್ಮ ಪ್ರವೇಶಕ್ಕೆ ಅಡ್ಡಿಪಡಿಸಿದ್ದವೋ ಅಂತಹವುಗಳ ಮೇಲೆ ಅವರು ಶಿಸ್ತುಕ್ರಮ ಕೈಗೊಂಡು ಶೋಷಿತ ವರ್ಗದ ಧ್ವನಿಯಾಗಬೇಕಿತ್ತು. ಅಲ್ಲವೇ?

ವಿ.ಜಿ.ಇನಾಮದಾರ, ಸಾರವಾಡ, ವಿಜಯಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.