ಇಡೀ ರಾಜ್ಯವೇ ಮಳೆಯಿಂದ ತತ್ತರಿಸುತ್ತಿರುವಾಗ, ಜನತೆ ಸಂಕಷ್ಟದಲ್ಲಿರುವಾಗ ‘ಜನಸಹಾಯ ಯಾತ್ರೆ’ ಬದಲಿಗೆ ಬಿಜೆಪಿಯು ‘ಜನಸ್ವರಾಜ್ ಯಾತ್ರೆ’ ಮತ್ತು ಸಮಾವೇಶಕ್ಕೆ ಮುಂದಾಗಿರುವುದು ಎಷ್ಟು ಸಮಂಜಸ ಎಂದು ಪ್ರಜ್ಞಾವಂತರು ಕೇಳುತ್ತಿದ್ದಾರೆ. ಯಾವುದೋ ಒಂದು ಕಾರಣವನ್ನು ಮುಂದೆ ಮಾಡಿಕೊಂಡು ಪುನಃ ಪುನಃ ಸಮಾವೇಶ ಮತ್ತು ಯಾತ್ರೆಗಳನ್ನು ನಡೆಸುತ್ತಿರುವುದು ಜನತೆಗೆ ರಾಜಕೀಯ ಪಕ್ಷಗಳ ಬಗೆಗೆ ಜುಗುಪ್ಸೆ ಮೂಡಿಸಿದೆ.
ಮಾರಿ ಕಣ್ಣು ಹೋರಿ ಮೇಲೆ ಎನ್ನುವಂತೆ ರಾಜಕಾರಣಿಗಳ ದೃಷ್ಟಿ ಯಾವಾಗಲೂ ಮುಂದಿನ ಚುನಾವಣೆಯ ಮೇಲೆ ಎನ್ನುವುದನ್ನು ನೋಡಿದಾಗ ಅವರ ಬಗೆಗೆ ತಿರಸ್ಕಾರ ಮೂಡುತ್ತದೆ. ಇಂತಹ ಯಾತ್ರೆಗಳಲ್ಲಿ ವ್ಯಕ್ತಿಪೂಜೆ, ಹೊಗಳಿಕೆ, ತೆಗಳಿಕೆಯನ್ನು ಬಿಟ್ಟು ಇನ್ನೇನಾದರೂ ಇರುತ್ತದೆಯೇ? ರಾಜಕೀಯ ಪಕ್ಷಗಳು ಹೆಸರು ಬದಲಾವಣೆ, ಪ್ರತಿಮೆ ಸ್ಥಾಪನೆ ಮತ್ತು ಯಾತ್ರೆ-ಸಮಾವೇಶಗಳ ಆಚೆಗೂ ಚಿಂತಿಸಬೇಕು.
-ರಮಾನಂದ ಶರ್ಮಾ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.