ADVERTISEMENT

ಯಾರಲ್ಲಿ ಮನವಿ ಮಾಡಬೇಕು?

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 20:15 IST
Last Updated 9 ಏಪ್ರಿಲ್ 2020, 20:15 IST

ಲಾಕ್‌ಡೌನ್‌ನಿಂದ ಇತರ ಕ್ಷೇತ್ರಗಳಂತೆ ಸಾಂಸ್ಕೃತಿಕ ವಲಯ ಕೂಡ ದಿಕ್ಕೆಟ್ಟು ಕೂತಿದೆ. ರಂಗಕಲಾವಿದರು, ಸಂಗೀತ– ನೃತ್ಯ ಕಲಾವಿದರು, ಜನಪದ ಕಲಾವಿದರು ಎಲ್ಲರೂ ಮನೆಯೊಳಗೆ ಕುಳಿತಿದ್ದಾರೆ. ನಮ್ಮಲ್ಲಿನ ರಂಗಶಾಲೆ
ಗಳಲ್ಲಿ ಕಲಿತವರಿಂದ ಮೊದಲ್ಗೊಂಡು ನಿರ್ದೇಶನ, ರಂಗವಿನ್ಯಾಸ, ಪ್ರಸಾಧನ, ರಂಗಸಂಗೀತ, ಸಂಘಟನೆಯಲ್ಲಿ ತೊಡಗಿ
ಸಿಕೊಂಡಿರುವ ಮಂದಿ ಇದ್ದಾರೆ. ಹಲವರು ಅರೆಕಾಲಿಕ ಕಿರು ರೆಪರ್ಟರಿ ಕಟ್ಟಿಕೊಂಡು ನಾಟಕ ಮಾಡುತ್ತಾರೆ.

ಇತ್ತೀಚೆಗಷ್ಟೇ ಮುಗಿದ ‘ಮಲೆಗಳಲ್ಲಿ ಮದುಮಗಳು’ ನಾಟಕದಲ್ಲಿ, ಗಾಂಧಿ ಪಯಣ, ತಿರುಗಾಟಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಪೂರ್ಣಾವಧಿ ಕಲಾವಿದರು ನಿರುದ್ಯೋಗಿಗಳಾಗಿದ್ದಾರೆ. ರಂಗಾಯಣಗಳು ಸೇರಿದಂತೆ ನೂರಾರು ತಂಡಗಳು, ಮಕ್ಕಳ ಬೇಸಿಗೆ ರಂಗತರಬೇತಿ ಶಿಬಿರಗಳಿಂದ ವಂಚಿತವಾಗಿವೆ. ಅಸಂಘಟಿತರಲ್ಲಿ ಅಸಂಘಟಿತರು ಇವರು. ಯಾವುದೇಸಂಘಟನೆ, ಸಂಸ್ಥೆ ಮಾಡಿಕೊಳ್ಳದೆ ತಮ್ಮ ಪಾಡಿಗೆ ತಾವು ಇದ್ದವರು. ಈಗ ಇವರ ಕೂಗು ಯಾರಿಗೆ ಕೇಳಬೇಕು, ಯಾರಲ್ಲಿ ಮನವಿ ಮಾಡಬೇಕು?

ಜನಪದ ಕಲಾವಿದರ ಪಾಡು ಇವರಿಗಿಂತ ಭಿನ್ನವೇನಲ್ಲ. ಜನಪದ ಜಾತ್ರೆ, ಸಂಸ್ಕೃತಿ ಇಲಾಖೆಯ ಜಯಂತಿಗಳು, ಊರ ಹಬ್ಬ
ಎಲ್ಲವೂ ಸ್ಥಗಿತಗೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಕಾಡೆಮಿಗಳು ಕಲಾವಿದರಿಗಾಗಿ ವಿಶೇಷ
ಆರ್ಥಿಕ ಪ್ಯಾಕೇಜ್ ಘೋಷಿಸಿ, ಒಂದು ನಿರ್ದಿಷ್ಟ ಕ್ರಿಯಾಯೋಜನೆಯ ಮೂಲಕ ನೆರವಿಗೆ ಧಾವಿಸಬೇಕಿದೆ. ಅಕಾಡೆಮಿಗಳ ಅಧ್ಯಕ್ಷರು, ಸದಸ್ಯರು, ರಂಗಸಮಾಜದ ಸದಸ್ಯರು, ರಂಗಾಯಣಗಳ ನಿರ್ದೇಶಕರು ಈ ಬಗ್ಗೆ ತುರ್ತಾಗಿ ಗಮನಹರಿಸಬೇಕಾಗಿದೆ.

ADVERTISEMENT

- ಶಶಿಧರ ಭಾರಿಘಾಟ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.