ADVERTISEMENT

ಕ್ಷಣಕಾಲದ ಕಷ್ಟಕ್ಕಾಗಿ...

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 19:45 IST
Last Updated 8 ಏಪ್ರಿಲ್ 2020, 19:45 IST

ಕೊರೊನಾ ಸೋಂಕು ನಿಯಂತ್ರಣದ ಉದ್ದೇಶದಿಂದ ಲಾಕ್‌ಡೌನ್‌ ಘೋಷಿಸಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಿಂದ ಲಾಕ್‌ಡೌನ್‌ಗೆ ಹೆಚ್ಚೇನೂ ಯಶಸ್ಸು ಸಿಕ್ಕಿಲ್ಲ ಎಂಬುದು ಸ್ಪಷ್ಟವಾಗುತ್ತದೆ.ಆರಂಭದಲ್ಲೇ ಅಂತರರಾಷ್ಟ್ರೀಯ ಗಡಿಗಳನ್ನು ಮುಚ್ಚದ ತಪ್ಪಿಗೆ ಈಗಾಗಲೇ ತೊಂದರೆಯಲ್ಲಿ ಸಿಲುಕಿದ್ದೇವೆ. ಮುಂದಾದರೂ ಅಗತ್ಯ ಪೂರ್ವನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಸಾರ್ವಜನಿಕರ ಅನಿವಾರ್ಯ ಅಗತ್ಯಗಳನ್ನು ಹೊರತುಪಡಿಸಿ ಉಳಿದವುಗಳ ಮೇಲೆ ನಿಷೇಧ ಮುಂದುವರಿಯಲಿ. ಕ್ಷಣಕಾಲದ ಕಷ್ಟ ತೊರೆಯಲು ದೀರ್ಘಕಾಲದ ಸುಖವನ್ನು ಬಲಿಕೊಡುವಂತೆ ಆಗಬಾರದು.

- ಗುರು ವರುಣ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT