ADVERTISEMENT

ಹೆಣ್ಣೆಂದರೆ ಅಷ್ಟು ಸದರವೇ?

ವಸುಂಧರಾ ಕೆ.ಎಂ.  ಬೆಂಗಳೂರು
Published 30 ಜನವರಿ 2019, 20:15 IST
Last Updated 30 ಜನವರಿ 2019, 20:15 IST

ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಸಚಿವರು ಗರಂ, ಪಕ್ಷದ ಸ್ಥಳೀಯ ನಾಯಕಿ ಮೇಲೆ ಮಾಜಿ ಮುಖ್ಯಮಂತ್ರಿ ಕೆಂಡಾಮಂಡಲ, ಮಹಿಳೆಯರಿಗೆ ದೇಗುಲ ಪ್ರವೇಶವಿಲ್ಲ, ಮಹಿಳೆಯರಿಗೆ ಸಮಾನ ಕೂಲಿ ನಿರಾಕರಣೆ, ಮಹಿಳೆಯರ ಮೇಲೆ ವಯೋಮಾನ ಭೇದವಿಲ್ಲದೆ ಅತ್ಯಾಚಾರ, ಹೆಣ್ಣು ಭ್ರೂಣ ಹತ್ಯೆ, ಅನಾಥ ಹೆಣ್ಣುಶಿಶು ಪತ್ತೆ, ವರದಕ್ಷಿಣೆ ಕಿರುಕುಳ, ಮಗಳ ಮರ್ಯಾದೆಗೇಡು ಹತ್ಯೆ, ಹೆಣ್ಣು ಮಗುವಿಗೆ ಶಿಕ್ಷಣ ನಿರಾಕರಣೆ... ಏನಿದೆಲ್ಲಾ?

ಹೆಣ್ಣು ಸಮಾಜಮುಖಿಯಾಗುತ್ತಿರುವುದು ಕೆಲವೇ ದಶಕಗಳಿಂದೀಚೆಗೆ. ಯಾರಿಂದಲೇ ಆಗಲಿ ತಪ್ಪುಗಳಾಗುವುದು ಸಹಜ. ಕನಿಷ್ಠಪಕ್ಷ ಸೌಜನ್ಯಯುತವಾಗಿ ಅವುಗಳನ್ನು ಪ್ರಶ್ನಿಸುವ, ತಿದ್ದುವ ಪ್ರಯತ್ನವಾದರೆ ತಪ್ಪಿಲ್ಲ. ಆದರೆ, ಒಂದೇ ಬಾರಿಗೆ ಆಕೆಯ ದನಿ ಅಡಗಿಸಲು ಮುಂದಾಗುವುದೇಕೆ? ಸಹಜೀವನ, ಸಹಬಾಳ್ವೆ ಎಂಬುದೆಲ್ಲಾ ಬರೀ ಸಂವಿಧಾನದಲ್ಲಿದ್ದರೆ ಏನು ಪ್ರಯೋಜನ? ಆಚರಣೆಗೆ ಬಾರದ ಸುಧಾರಣೆಗಳು ಕಾನೂನಿನಲ್ಲಷ್ಟೇ ಉಳಿದರೆ ಸಮಾಜಕ್ಕೇನೂ ಒಳಿತಾಗದು.

ಇವುಗಳನ್ನೆಲ್ಲಾ ಖಂಡಿಸಲು ಸಾಧ್ಯವಾಗಿರುವುದಷ್ಟೇ ಮಹಿಳೆಯರಿಗೆ ದೊರೆತಿರುವ ಅವಕಾಶವೇ? ಮಹಿಳೆಯರನ್ನು ಸಮಾನವಾಗಿ, ಗೌರವಯುತವಾಗಿ ಕಾಣುವವರೆಗೂ ಈ ದೇಶಕ್ಕೆ ಜಾಗತಿಕ ಮನ್ನಣೆ ದೊರೆಯಲಾರದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.