ADVERTISEMENT

ಕೆ.ಜಿ.ಐ.ಡಿ. ಗಣಕೀಕೃತವಾಗಲಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 20:10 IST
Last Updated 20 ಫೆಬ್ರುವರಿ 2019, 20:10 IST

‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬಂತೆ ಇಂದಿನ ಯುಗದಲ್ಲಿ ಕಂಪ್ಯೂಟರ್ ಇಲ್ಲದ ಕ್ಷೇತ್ರವಿಲ್ಲ. ದೊಡ್ಡ ದೊಡ್ಡ ಖಾಸಗಿ ಸಂಸ್ಥೆಗಳಿಂದ ಹಿಡಿದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳವರೆಗಿನ ಮಾಹಿತಿಯೂ ಗಣಕೀಕೃತಗೊಂಡಿದೆ.

ಇಂತಹ ಜಮಾನಾದಲ್ಲೂ ಮಾಹಿತಿಗಳು ಗಣಕೀಕೃತಗೊಳ್ಳದೆ, ಓಬೀರಾಯನ ಕಾಲದಂತೆ ಬರೀ ಪೆನ್ನು, ಫೈಲುಗಳನ್ನು ಹಿಡಿದು ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಇಲಾಖೆಯೊಂದಿದೆ ಎಂದರೆ ನೀವು ನಂಬಲೇಬೇಕು.

ಹೌದು, ಅದೇ ಕೆ.ಜಿ.ಐ.ಡಿ.ಇಷ್ಟೆಲ್ಲಾ ತಂತ್ರಜ್ಞಾನ ಮುಂದುವರಿದಿರುವಾಗ ಕೆ.ಜಿ.ಐ.ಡಿ.ಯನ್ನು ಗಣಕೀಕೃತಗೊಳಿಸಲು ಸರ್ಕಾರ ಮೀನಮೇಷ ಎಣಿಸುತ್ತಿರುವುದು ಯಾಕೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಸಂಬಂಧಪಟ್ಟವರು ತ್ವರಿತವಾಗಿ ಇಲಾಖೆಯನ್ನು ಗಣಕೀಕೃತಗೊಳಿಸಿ, ಸರ್ಕಾರಿ ನೌಕರರ ವಹಿವಾಟು ಸರಾಗವಾಗಿ ಆಗಲು ಅನುವು ಮಾಡಿಕೊಡಬೇಕು.

ADVERTISEMENT

–ಬಸವನಗೌಡ ಹೆಬ್ಬಳಗೆರೆ,ಚನ್ನಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.