ADVERTISEMENT

ಚುನಾವಣಾ ವೆಚ್ಚ ವಸೂಲು ಮಾಡಲಿ

​ಪ್ರಜಾವಾಣಿ ವಾರ್ತೆ
Published 26 ಮೇ 2019, 20:00 IST
Last Updated 26 ಮೇ 2019, 20:00 IST

ಹಾಸನದ ಸಂಸದರಾಗಿ ಆಯ್ಕೆಯಾದ ಮರುದಿನವೇ, ರಾಜೀನಾಮೆ ನೀಡುವುದಾಗಿ ಪ್ರಜ್ವಲ್‌ ರೇವಣ್ಣ ಹೇಳಿದ್ದಾರೆ. ‘ಕೇಂದ್ರದಲ್ಲಿ ರೈತರ ಪರ ದನಿ ಎತ್ತುವವರು ದೇವೇಗೌಡರು’ ಎಂದಿದ್ದಾರೆ. ಆದರೆ ಈ ಕೆಲಸವನ್ನು ತಾವು ಮಾಡಲಾಗದು ಎಂದು ಅವರು ಏಕೆ ತಿಳಿದಿದ್ದಾರೋ ಅರ್ಥವಾಗುತ್ತಿಲ್ಲ.

ಗೌಡರ ಮಾರ್ಗದರ್ಶನ ಪಡೆದು, ಅವರೇ ಸಂಸತ್ತಿನಲ್ಲಿ ರೈತರ ಧ್ವನಿಯಾಗಬಹುದು. ಇದರಿಂದ ಅವರ ಅನುಭವವು ಹೆಚ್ಚುತ್ತದೆ.ಪುನಃ ಚುನಾವಣೆ ಎದುರಾದರೆ, ಚುನಾವಣೆ ನಡೆಸಲು ಬೇಕಾದ ಕೋಟ್ಯಂತರ ರೂಪಾಯಿ ವೆಚ್ಚವನ್ನು ಭರಿಸುವವರು ಯಾರು? ರಾಜೀನಾಮೆ ನೀಡಿದವರೇ ಅದನ್ನು ತುಂಬಿಕೊಡುವುದಾದರೆ ಪರವಾಗಿಲ್ಲ. ಅದಕ್ಕೆ ಇವರು ಸಿದ್ಧರಿದ್ದಾರೆಯೇ?

-ದರ್ಶನ್ ಕೆ.ಓ, ತರೀಕೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.