ADVERTISEMENT

ಹೊಸ ಜಿಲ್ಲೆ ಪ್ರಸ್ತಾವ: ಸೂಕ್ಷ್ಮ ಅರಿಯಿರಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 18:47 IST
Last Updated 17 ಅಕ್ಟೋಬರ್ 2019, 18:47 IST

ಒಂದು ಹೊಸ ಜಿಲ್ಲೆಯನ್ನು ರಚಿಸುವಲ್ಲಿ ಅನೇಕ ಮಾನದಂಡಗಳಿರುತ್ತವೆ ಮತ್ತು ಅವುಗಳ ಜೊತೆಗೆ ಕೆಲವು ಸೂಕ್ಷ್ಮ ವಿಚಾರಗಳನ್ನೂ ಗಮನಿಸಬೇಕಾಗುತ್ತದೆ. ಉದಾಹರಣೆಗೆ, ಬೆಳಗಾವಿಯಲ್ಲಿ ಆಗಾಗ ಕನ್ನಡ ಭಾಷೆಗೆ ಹಿನ್ನಡೆ ಆದಾಗ ಭಾಷಾ ಬೆಂಬಲಕ್ಕೆ ಕನ್ನಡ ಭಾಷಾ ಸಂಘಟನೆಗಳು ನಿಲ್ಲುತ್ತವೆ. ಇಂತಹ ಸಂಘಟನೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿರುವವರು ಅಖಂಡ ಬೆಳಗಾವಿ ಜಿಲ್ಲೆಯ ಯುವಕರು ಮತ್ತು ಸಾಹಿತಿಗಳು. ಒಂದು ವೇಳೆ ಈ ಜಿಲ್ಲೆ ವಿಭಜನೆಯಾದರೆ ನಗರದಲ್ಲಿ ಕನ್ನಡದ ಪ್ರಭಾವ ಕಡಿಮೆ ಆಗುವ ಸಾಧ್ಯತೆ ಇದೆ.

ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಬಹುದು. ಉದಾಹರಣೆಗೆ, ಇನ್ನೂ ಹೆಚ್ಚು ಉಪವಿಭಾಗಗಳನ್ನು ರಚಿಸಬಹುದು ಅಥವಾ ಜಿಲ್ಲೆಯ ಕೊನೆಯ ಭಾಗದ ಹಳ್ಳಿಗಳನ್ನು ಸಮೀಪದ ವಿಜಯಪುರ ಜಿಲ್ಲೆಗೆ ಸೇರಿಸಬಹುದು. ಹೀಗಾಗಿ, ಅಖಂಡ ಬೆಳಗಾವಿ ಜಿಲ್ಲೆ ಈಗಿರುವಂತೆಯೇ ಮುಂದುವರಿಯುವುದು ಒಳ್ಳೆಯದು.
-ಆದಿತ್ಯ ಜುಗೂಳ್ಕರ, ಚಿಕ್ಕೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT