ADVERTISEMENT

ಇದೊಂದು ಘನಂದಾರಿ ಕಾರ್ಯವೇ?

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 19:59 IST
Last Updated 27 ನವೆಂಬರ್ 2019, 19:59 IST

‘ಡಾ. ಕೆ.ಸುಧಾಕರ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲು ನಾನೇ ಕಾರಣ. ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿಸುವಲ್ಲಿ ನಾನೇ ಪ್ರಮುಖ ಪಾತ್ರ ವಹಿಸಿದೆ’ ಎಂದು ಬಿಜೆಪಿ ಮುಖಂಡ ಎಸ್.ಎಂ. ಕೃಷ್ಣ ಹೇಳಿರುವುದು ವರದಿಯಾಗಿದೆ (ಪ್ರ.ವಾ., ನ.27). ಕೃಷ್ಣ ತಾವು ಮಾಡಿದ್ದು ಘನಂದಾರಿ ಕೆಲಸ ಎಂಬಂತೆ ಹೇಳಿಕೊಂಡಿರುವುದು ಅವರಿಗೆ ತರವಲ್ಲ. ಶಾಸಕ, ಮಂತ್ರಿ, ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ, ಕೇಂದ್ರ ಸಚಿವ, ಮಹಾರಾಷ್ಟ್ರದ ರಾಜ್ಯಪಾಲ ಎಲ್ಲವೂ ತಾವು ಆಗಿದ್ದು ಕಾಂಗ್ರೆಸ್ ಪಕ್ಷದಿಂದ ಎಂಬುದನ್ನು ಅವರು ಬೇಕೆಂದೇ ಮರೆತಂತಿದೆ. ಇದು ‘ಉಂಡ ಮನೆಗೆ ದ್ರೋಹ ಬಗೆದರು’ ಎಂಬ ಮಾತಿಗೆ ಅತ್ಯುತ್ತಮ ಉದಾಹರಣೆ.

ಅಲ್ಲದೆ, ಹದಿನೈದು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವಂತಾಗಿ ಜನರ ತೆರಿಗೆ ಹಣ ವೃಥಾ ಪೋಲಾಗು
ವುದಕ್ಕೆ ಅವರು ನೇರ ಕಾರಣರಾಗಿದ್ದಾರೆ. ಇರುವ ಸರ್ಕಾರವನ್ನು ಕೆಡಹುವುದು ಇಂತಹ ಅನುಭವಿಗಳಿಗೆ
ಶೋಭೆ ತಾರದು.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.