ADVERTISEMENT

ಇಂಥ ಯೋಜನೆ ಬೇಕೇ?

ವಿದ್ಯಾಧರ್ ಹಿಪ್ಪರಗಿ ವಿಜಯಪುರ
Published 2 ಸೆಪ್ಟೆಂಬರ್ 2018, 18:36 IST
Last Updated 2 ಸೆಪ್ಟೆಂಬರ್ 2018, 18:36 IST

ಪ್ರವಾಹದಿಂದಾಗಿ ಕೇರಳದಲ್ಲಿ ಈ ಬಾರಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ನಮ್ಮದೇ ರಾಜ್ಯದ ಕೊಡಗು ಜಿಲ್ಲೆಯಲ್ಲೂ ಜನರು ತತ್ತರಿಸಿಹೋಗಿದ್ದಾರೆ.

ಇಂಥ ಸಂದರ್ಭದಲ್ಲೇ ನಮ್ಮ ನೀರಾವರಿ ಸಚಿವರು, ‘ಮೇಕೆದಾಟು ಯೋಜನೆಯ ಸಲುವಾಗಿ 4000 ಎಕರೆಅರಣ್ಯ ಪ್ರದೇಶ ಮುಳುಗಡೆ ಆಗುತ್ತದೆ’ ಎಂದು ಹೇಳಿರುವುದು ಆತಂಕ ಮೂಡಿಸುತ್ತದೆ.

ಪರಿಸರದ ಮೇಲೆ ಪರಿಣಾಮ ಬೀರುವಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮುನ್ನ ಪರಿಸರ ತಜ್ಞರ ಅಭಿಪ್ರಾಯ ಪಡೆಯುವ ಪರಿಪಾಟವನ್ನು ಇನ್ನಾದರೂ ರೂಢಿಸಿಕೊಳ್ಳುವುದು ಒಳ್ಳೆಯದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.