ADVERTISEMENT

ಯಾರು ದೊಡ್ಡವರು?

ಕೆ.ಜಿ.ಭದ್ರಣ್ಣವರ, ಮುದ್ದೇಬಿಹಾಳ
Published 2 ಸೆಪ್ಟೆಂಬರ್ 2018, 18:32 IST
Last Updated 2 ಸೆಪ್ಟೆಂಬರ್ 2018, 18:32 IST

ಬ್ಯಾಂಕುಗಳಿಗೆ ವಂಚನೆ ಮಾಡಿ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ ಭಾರತಕ್ಕೆ ಬಂದರೆ, ಅವರನ್ನಿಡುವ ಜೈಲು ಕೋಣೆಯ ಸೌಕರ್ಯಗಳ ಬಗ್ಗೆ ವಿಡಿಯೊ ಮಾಡಿ ಲಂಡನ್ನಿನ ನ್ಯಾಯಾಲಯಕ್ಕೆ ಸಿ.ಬಿ.ಐ. ಸಲ್ಲಿಸಿದೆ
(ಪ್ರ.ವಾ., ಆ. 25). ಇಂಥದ್ದೇ ಆರೋಪ ಒಬ್ಬ ಸಾಮಾನ್ಯನ ಮೇಲಿದ್ದರೆ ಕಾನೂನು ನಿರ್ದಯವಾಗಿ ತನ್ನ ಕಾಲಿನಿಂದ ತುಳಿದು ಹೊಸಕಿ ಹಾಕುತ್ತಿರಲಿಲ್ಲವೇ?

‘ವ್ಯಕ್ತಿಗಿಂತ ಕಾನೂನು ದೊಡ್ಡದು’ ಎಂದು ನಮ್ಮಸಂವಿಧಾನ ಸಾರುತ್ತದೆ! ಇದನ್ನು ನಾವೆಲ್ಲರೂ ಒಪ್ಪಿ ನಡೆಯುತ್ತಿದ್ದೇವೆ. ಮಲ್ಯ ಅವರನ್ನು ಭಾರತಕ್ಕೆ ಕರೆತರುವಲ್ಲಿ ಅಥವಾ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿ
ಕೊಂಡು ಅವರು ಪಡೆದ ಸಾಲವನ್ನು ಹಿಂಪಡೆವಲ್ಲಿ ಕಾನೂನುಯಶ್ವಸಿಯಾಗಿಲ್ಲ. ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಕಾನೂನು ದೊಡ್ಡದೋ ಅಥವಾ ವ್ಯಕ್ತಿ ದೊಡ್ಡವನೋ ಎಂಬ ಸಂದೇಹ ಮೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT