ADVERTISEMENT

ಬಾಕಿ ವಸೂಲು ಮಾಡಲಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 19:45 IST
Last Updated 10 ಫೆಬ್ರುವರಿ 2020, 19:45 IST

ನೀರು, ವಿದ್ಯುತ್ ದರ ಹಾಗೂ ಮನೆ ಕಂದಾಯ ಹೆಚ್ಚಿಸುವ ಪ್ರಸ್ತಾವವನ್ನು ಸಂಬಂಧಪಟ್ಟ ಸಂಸ್ಥೆಗಳು ಆಗಿಂದಾಗ್ಗೆ ಮಾಡುತ್ತಲೇ ಇರುತ್ತವೆ. ಹೀಗೆ ಹೆಚ್ಚಳದ ಪ್ರಸ್ತಾವ ಮುಂದಿಡುವ ಮುನ್ನ ಈ ಸಂಸ್ಥೆಗಳು ತಮಗೆ ಬರಬೇಕಾದ ಬಾಕಿಯ ಬಗ್ಗೆ ಯೋಚಿಸುವುದೇ ಇಲ್ಲ. ಪ್ರಾಮಾಣಿಕವಾಗಿ ಅಥವಾ ಯಾವುದೋ ಒತ್ತಡ, ಮುಲಾಜಿಗೆ ಒಳಗಾಗಿ ವಸೂಲಿ ಮಾಡುತ್ತಿಲ್ಲವೇನೊ! ಜಲಮಂಡಳಿ ಈಗ ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಿಸಲು ಮುಂದಾಗಿದೆ.

ಮಾಧ್ಯಮ ಮಾಹಿತಿ ಪ್ರಕಾರ, ಜಲಮಂಡಳಿಗೆ 2019ರ ಡಿಸೆಂಬರ್ ತಿಂಗಳವರೆಗೆ ವಸೂಲಾಗದ ಬಾಕಿ ಕೋಟ್ಯಂತರ ರೂಪಾಯಿ ಇದೆ. ಸೋಜಿಗದ ಸಂಗತಿ ಎಂದರೆ, ಬಿಬಿಎಂಪಿ, ವಾಣಿಜ್ಯ ಕ್ಷೇತ್ರದ ಜೊತೆಗೆ ಸರ್ಕಾರವೂ ಈ ಬಾಕಿದಾರರಲ್ಲಿ ಸೇರಿರುವುದು. ಇನ್ನು ಗೃಹ ಬಳಕೆದಾರರು, ಕೈಗಾರಿಕೆಗಳು, ಪ್ರಾಧಿಕಾರಗಳು ಹೀಗೆ ಬಾಕಿದಾರರು ಬಹಳಷ್ಟಿದ್ದಾರೆ.

ಇದು ಮಂಡಳಿಯ ಕಾರ್ಯವೈಖರಿಗೆ ಹಿಡಿದ ಕನ್ನಡಿ. ಸರ್ಕಾರವೂ ಸೇರಿದಂತೆ ಇತರ ಸಂಸ್ಥೆಗಳಿಂದ ಬಾಕಿ ವಸೂಲು ಮಾಡದೆಯೇ, ದರ ಹೆಚ್ಚಿಸುವ ಮೂಲಕ ನಷ್ಟ ಭರ್ತಿಗೆ ಗ್ರಾಹಕರನ್ನು ಹೊಣೆ ಮಾಡುತ್ತದೆ ಜಲಮಂಡಳಿ. ಇದು ನೈತಿಕವಾಗಿ ಹೊಣೆಗೇಡಿತನ ಅಲ್ಲವೇ?

ADVERTISEMENT

-ಸಾಮಗ ದತ್ತಾತ್ರಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.