ADVERTISEMENT

ಗೌರವಯುತ ಕೆಲಸದಲ್ಲಿ ತೊಡಗಿಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 11 ಅಕ್ಟೋಬರ್ 2020, 19:31 IST
Last Updated 11 ಅಕ್ಟೋಬರ್ 2020, 19:31 IST

ಸಮಾಜದಲ್ಲಿ ತೃತೀಯ ಲಿಂಗಿಗಳಿಗೆ ತಮ್ಮದೇ ಆದ ಗೌರವ ಇದೆ. ಹಳ್ಳಿಗರ ಮನೆಗಳಲ್ಲಿ ಕಾರ್ಯಕ್ರಮಗಳು ಜರುಗಿದರೆ ತೃತೀಯ ಲಿಂಗಿಗಳ ಪಾತ್ರ ಬಹುಮುಖ್ಯ ಮತ್ತು ಅವರ ಉಪಸ್ಥಿತಿಯನ್ನು ಶುಭಸೂಚಕ ಎಂದು ಪರಿಗಣಿಸಲಾಗುತ್ತದೆ. ಆದರೆ ಪಟ್ಟಣ, ನಗರಗಳಲ್ಲಿ ಅದಕ್ಕೆ ತದ್ವಿರುದ್ಧದ ಸ್ಥಿತಿ ಇದೆ.

ಬೆಂಗಳೂರು ದಿನಾಲೂ ಸಾವಿರಾರು ಜನ ಬಂದು ಹೋಗುವ ಮಹಾನಗರ. ಬಿಎಂಟಿಸಿ ಫ್ಲೈ ಓವರ್‌ ಮತ್ತು ರೈಲು ನಿಲ್ದಾಣಕ್ಕೆ ಹೋಗುವ ಕೆಳ ದಾರಿಯಂತಹ ಸ್ಥಳಗಳಲ್ಲಿ ತೃತೀಯ ಲಿಂಗಿಗಳು ಒಬ್ಬಂಟಿ ಯುವಕರನ್ನು ನಿಂದಿಸುವುದು ಮತ್ತು ಅವರ ಜತೆ ಕೆಟ್ಟದಾಗಿ ವರ್ತಿಸುವ ಸನ್ನಿವೇಶಗಳು ಅಲ್ಲಿ ಇರುವ ಭದ್ರತಾ ಸಿಬ್ಬಂದಿಯ ಎದುರೇ ನಡೆಯುತ್ತವೆ. ಸರ್ಕಾರ ಅಥವಾ ಸ್ವಯಂ ಸೇವಾ ಸಂಸ್ಥೆಗಳು ಇಂತಹವರನ್ನು ಗುರುತಿಸಿ, ಗೌರವಯುತ ಕೆಲಸಗಳಲ್ಲಿ ತೊಡಗಲು ದಾರಿ ಮಾಡಿಕೊಡಬೇಕು.

- ಸಂಪತ್ ಆಕಳವಾಡಿ, ಕೊಪ್ಪಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.