ADVERTISEMENT

ವಾಚಕರ ವಾಣಿ | ಸಮವಸ್ತ್ರದ ಬಣ್ಣ: ಪುನರ್‌ಪರಿಶೀಲಿಸಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 19:30 IST
Last Updated 31 ಜುಲೈ 2020, 19:30 IST

ಶಾಲಾ ವಿದ್ಯಾರ್ಥಿಗಳಿಗೆ ವಿತರಿಸುವ ಉಚಿತ ಸಮವಸ್ತ್ರದ ಬಣ್ಣದ ಆಯ್ಕೆ ಅಧಿಕಾರವನ್ನು ಎಸ್‌ಡಿಎಂಸಿಗೆ ವಹಿಸುವ ಶಿಕ್ಷಣ ಇಲಾಖೆಯ ನಿರ್ಧಾರ (ಪ್ರ.ವಾ., ಜುಲೈ 30) ಅಸಮಂಜಸವಾಗಿದೆ. ಇದರಿಂದ, ರಾಜಕೀಯ ಬಣಗಳ ರಾಡಿಯು ಶಾಲಾ ಅಂಗಳದಲ್ಲಿ ವಿವಿಧ, ವಿಚಿತ್ರ ಬಣ್ಣಗಳ ರೂಪದಲ್ಲಿ ವಿಜೃಂಭಿಸುತ್ತಾ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಅಲ್ಲದೆ, ಖಾಸಗಿ ಶಾಲೆಗಳಂತೆ ತರಾವರಿ ಬಣ್ಣದ ಸಮವಸ್ತ್ರಗಳು ಜಾರಿಗೆ ಬಂದರೆ, ಸರ್ಕಾರಿ ಶಾಲೆಗಳಲ್ಲಿನ ‘ಸಮವಸ್ತ್ರದ ಸಮಾನತೆ’ ಅರ್ಥ ಕಳೆದುಕೊಳ್ಳುತ್ತದೆ. ಆದ್ದರಿಂದ ಇಲಾಖೆಯು ಈ ನಿರ್ಧಾರವನ್ನು ಪುನರ್‌ ಪರಿಶೀಲಿಸಬೇಕು.

-ಮಹಾಂತೇಶ್ ಬಿ. ನಿಟ್ಟೂರ್,ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT