ADVERTISEMENT

ವಾಚಕರ ವಾಣಿ | ಬ್ಯಾಂಕುಗಳು ಎಷ್ಟು ಸುರಕ್ಷಿತ?

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 19:30 IST
Last Updated 28 ಜುಲೈ 2020, 19:30 IST

ಭಾರತೀಯ ಬ್ಯಾಂಕುಗಳು ಸುರಕ್ಷಿತವಾಗಿದ್ದು, ಅನುತ್ಪಾದಕ ಆಸ್ತಿಯದೇ ಸಮಸ್ಯೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಇತ್ತೀಚೆಗೆ ಹೇಳಿದೆ. ಕೆಲವು ಬ್ಯಾಂಕಿಂಗ್‌ ತಜ್ಞರು ಇದನ್ನು ‘ಆಪರೇಷನ್‌ ಸಕ್ಸಸ್... ಪೇಷಂಟ್‌ ಡೆಡ್’ ಎಂದು ತಮಾಷೆ ಮಾಡಿದ್ದಾರೆ. ಅನುತ್ಪಾದಕ ಆಸ್ತಿ ಹೆಚ್ಚಿದಷ್ಟೂ ಬ್ಯಾಂಕುಗಳು ದುರ್ಬಲವಾಗುತ್ತವೆ ಎನ್ನುವುದು ಸಾಮಾನ್ಯ ತಿಳಿವಳಿಕೆ. ಅನುತ್ಪಾದಕ ಆಸ್ತಿಯ ಪ್ರಮಾಣ ಶೇ 12.5ಕ್ಕೆ ಏರಿದ್ದು, ಕೊರೊನಾ ಸೋಂಕಿನ ಆಘಾತದಿಂದ ದೇಶ ಚೇತರಿಸಿ
ಕೊಳ್ಳುವ ಹೊತ್ತಿಗೆ ಈ ಮೊತ್ತ ದುಪ್ಪಟ್ಟು ಆಗಬಹುದು ಎಂದು ಕೆಲವು ಬ್ಯಾಂಕರ್‌ಗಳು ಹೇಳುತ್ತಿದ್ದಾರೆ ಮತ್ತು ಈ ಕುರಿತು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹೀಗಿರುವಾಗ, ಬ್ಯಾಂಕುಗಳು ಹೇಗೆ ಸುರಕ್ಷಿತ ಎನ್ನುವುದು ತಿಳಿಯದು.

ರಮಾನಂದ ಶರ್ಮಾ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT