ADVERTISEMENT

ನಿರಾಶ್ರಿತರ ನಿಧಿಗೆ ನೀಡಿದ ಹಣದ ಲೆಕ್ಕ ಕೇಳುವ ಹಕ್ಕು ನಾಗರಿಕರಿಗಿದೆ

ಮಿಸ್ಟೆಕ್

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 17:36 IST
Last Updated 17 ಅಕ್ಟೋಬರ್ 2018, 17:36 IST

ಕೊಡಗಿನಲ್ಲಿ ನೆರೆ ಹಾವಳಿ ಆಗಿ ಎರಡು ತಿಂಗಳಾಯಿತು. ನಿರಾಶ್ರಿತರಿಗೆ ಸಹಾಯ ಮಾಡಲು ಜನರಿಂದ ದೇಣಿಗೆ ಸಂಗ್ರಹಿಸಲಾಯಿತು. ಮುಖ್ಯಮಂತ್ರಿ ನೆರೆ ಪರಿಹಾರ ನಿಧಿ ಖಾತೆಗೆ ಹಣ ಸಂದಾಯ ಮಾಡಲು ಸರ್ಕಾರವೇ ವಿನಂತಿಸಿತು. ಅದರಂತೆ ನಾಗರಿಕರು ತಮ್ಮ ಕೈಲಾದಷ್ಟು ದೇಣಿಗೆ ನೀಡಿದರು. ಕೊಡಗಿನ ಜನರ ಕಷ್ಟಕ್ಕೆ ಸ್ಪಂದಿಸಿದರು.

ಆದರೆ ನಗದು, ಚೆಕ್‌, ಡಿ.ಡಿ., ಪೇಟಿಎಂ ಮುಂತಾದ ರೂಪದಲ್ಲಿ ಎಷ್ಟು ಹಣ ಹರಿದುಬಂತು, ಆ ಹಣ ಎಲ್ಲಿಗೆ ಹೋಯಿತು, ಹೇಗೆಲ್ಲ ಬಳಕೆಯಾಯಿತು ಎಂಬ ವಿವರಗಳನ್ನು ಸರ್ಕಾರ ಈವರೆಗೂ ಬಹಿರಂಗಪಡಿ
ಸಿಲ್ಲ ಏಕೆ? ತಾವು ನೀಡಿದ ಹಣ ಹೇಗೆ ಬಳಕೆಯಾಯಿತು ಎಂಬುದನ್ನು ತಿಳಿಯುವ ಹಕ್ಕು ನಾಗರಿಕರಿಗೆ ಇದೆ ಅಲ್ಲವೇ?

ಮಾಧ್ಯಮದವರೂ ಕೊಡಗನ್ನು ಈಗ ಮರೆತಂತಿದೆ. ಅಲ್ಲಿ ಏನು ಕೆಲಸ ಆಗಿದೆ,‌ ಇನ್ನೂ ಏನೆಲ್ಲ ಆಗಬೇಕು, ಜನರ ಕಷ್ಟ ಕರಗಿದೆಯೇ ಎಂಬುದರ ಬಗ್ಗೆ ಸರ್ಕಾರದ ಕಣ್ಣು ತೆರೆಸಬೇಕಾದ ಹೊಣೆ ಮಾಧ್ಯಮಕ್ಕಿದೆ.

ADVERTISEMENT

–ಪ್ರಶಾಂತ್ ಕೊಡ್ನಾಡ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.