ADVERTISEMENT

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಲಾ 10 ಸಸಿ ನೀಡುವ ಚಿಂತನೆ ಅರ್ಥಪೂರ್ಣ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 17:36 IST
Last Updated 17 ಅಕ್ಟೋಬರ್ 2018, 17:36 IST

‘ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಲಾ10 ಸಸಿಗಳನ್ನು ಕೊಡಲು ನಿರ್ಧರಿಸಲಾಗಿದೆ. ಅವುಗಳನ್ನು ಮೂರು ವರ್ಷ ಆರೈಕೆ ಮಾಡಿದರೆ 10ನೇ ತರಗತಿಯಲ್ಲಿ ತಲಾ 10 ಅಂಕ ನೀಡುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಅರಣ್ಯ ಸಚಿವ ಆರ್‌. ಶಂಕರ್‌ ಕಲಬುರ್ಗಿಯಲ್ಲಿ ಹೇಳಿದ್ದಾರೆ(ಪ್ರ.ವಾ., ಅ. 17).

ಇದು ಒಳ್ಳೆಯ ಬೆಳವಣಿಗೆ. ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಲು ಇದು ನೆರವಾಗಲಿದೆ.

ಈ ಚಿಂತನೆ ಅರ್ಥಪೂರ್ಣವಾಗಿದೆ. ಆದರೆ ನಮ್ಮ ಇನ್ನಿತರ ಹಲವು ಯೋಜನೆಗಳಂತೆ ಕಾಟಾಚಾರದ ಕೆಲಸ ಆಗಬಾರದು. ಆಕರ್ಷಕ ಹೆಸರುಗಳೊಂದಿಗೆ ಹಲವಾರು ಯೋಜನೆಗಳು ಘೋಷಣೆ ಆಗುತ್ತವೆ. ಶುರುವಿನಲ್ಲಿ, ಅದರಿಂದ ಪ್ರಯೋಜನ ಆಗಬಹುದು ಎಂಬ ಭರವಸೆಯೂ ಮೂಡುತ್ತದೆ. ಆದರೆ ಅನುಷ್ಠಾನದಲ್ಲಿನ ವೈಫಲ್ಯವು ಭ್ರಮನಿರಸನಗೊಳ್ಳುವಂತೆ ಮಾಡುತ್ತದೆ.

ADVERTISEMENT

ಬರೀ ಸಸಿ ಕೊಟ್ಟರೆ ಸಾಲದು. ಆ ಸಸಿಗಳ ಆರೈಕೆ ಬಗ್ಗೆ ನಿಗಾ ವಹಿಸುವ ವ್ಯವಸ್ಥೆ ಆಗಬೇಕು. ಸತತ ಪರಿಶೀಲನೆಗೆ ಒಳಗಾಗಬೇಕು. ಪರಿಶೀಲನೆ ಹಂತದಲ್ಲೇ ಸಸಿಗಳ ಆರೈಕೆ ಹೇಗಿದೆ ಎಂಬುದು ದಾಖಲಾಗಬೇಕು. ಅದರ ಆಧಾರದಲ್ಲಿ ಅಂಕ ನೀಡಬೇಕು. ಇದನ್ನೆಲ್ಲ ಮಾಡುವಷ್ಟು ವ್ಯವಧಾನ ಸರ್ಕಾರಕ್ಕೆ ಇದೆಯೇ?

–ಆನಂದ ಸಣಮನಿ,ಬಗರನಾಳ, ಹುಕ್ಕೇರಿ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.