ADVERTISEMENT

ಎಸಿಬಿ ಮಾಹಿತಿ ಪ್ರಚಾರವಾಗಲಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 22:32 IST
Last Updated 16 ಫೆಬ್ರುವರಿ 2021, 22:32 IST

ರಾಜ್ಯದಲ್ಲಿ ಲೋಕಾಯುಕ್ತಕ್ಕೆ ಪರ್ಯಾಯವಾಗಿ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ಸೃಜಿಸಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ನೌಕರ ಅಥವಾ ಅಧಿಕಾರಿಗಳು ಲಂಚಕ್ಕಾಗಿ ಬೇಡಿಕೆ ಇಟ್ಟಲ್ಲಿ, ಎಸಿಬಿ ಅಧಿಕಾರಿಗಳನ್ನು ಸಂಪರ್ಕಿಸಲು ಅಗತ್ಯವಾದ ವಿಳಾಸ ಹಾಗೂ ಮೇಲಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಕಚೇರಿಯ ಮುಖ್ಯದ್ವಾರದ ಬಳಿ ಬರೆಯುವುದು ಕಡ್ಡಾಯವಾಗಿದೆ.ಆದರೆ ಎಸಿಬಿ ರಚನೆಯಾಗಿ ವರ್ಷಗಳೇ ಕಳೆದರೂ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಇಂತಹ ಮಾಹಿತಿಯುಳ್ಳ ಫಲಕ ಅಳವಡಿಕೆ ಕಾರ್ಯ ಅನುಷ್ಠಾನಕ್ಕೆ ಬಂದಿಲ್ಲ.

ಇದರಿಂದ ಅಧಿಕಾರಿ, ನೌಕರರ ಭ್ರಷ್ಟಾಚಾರದಿಂದ ನೊಂದ ನಾಗರಿಕರಿಗೆ ಎಸಿಬಿ ರಚನೆ ಮತ್ತು ಕಾರ್ಯವ್ಯಾಪ್ತಿಯ ಮಾಹಿತಿ ಇಲ್ಲದಂತಾಗಿದೆ. ಹೀಗಾಗಿ, ಸರ್ಕಾರಿ ಕೆಲಸಕ್ಕೆ ಲಂಚ ಕೇಳಿದ ನೌಕರ ಅಥವಾ ಅಧಿಕಾರಿಯ ವಿರುದ್ಧ ದೂರು ನೀಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಈ‌ ಕುರಿತು ಎಸಿಬಿ ಮುಖ್ಯಸ್ಥರು ಗಮನಹರಿಸಿ, ಎಲ್ಲ ಕಚೇರಿಗಳಲ್ಲಿ ಅಗತ್ಯ ಮಾಹಿತಿಯನ್ನು
ಪ್ರಚುರಪಡಿಸಲಿ.
-ಲಕ್ಷ್ಮೀಕಾಂತರಾಜು ಎಂ.ಜಿ.,ಮಠಗ್ರಾಮ, ಗುಬ್ಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT