ADVERTISEMENT

ವಾಚಕರ ವಾಣಿ: ಸಮುದಾಯಕ್ಕೊಂದು ಪ್ರಾಧಿಕಾರ ಬೇಕೇ?

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 19:30 IST
Last Updated 15 ನವೆಂಬರ್ 2020, 19:30 IST

ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಸರ್ಕಾರ ತೀರ್ಮಾನಿಸಿದೆ (ಪ್ರ.ವಾ., ನ. 15).ಮುಂಬರುವ ಬೆಳಗಾವಿ ಲೋಕಸಭೆ ಉಪಚುನಾವಣೆ ಪ್ರಯುಕ್ತ ಮರಾಠಿಗರ ಮತ ಸೆಳೆಯುವುದು ಇದರ ಉದ್ದೇಶ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಹಲವಾರು ಸಮುದಾಯಗಳಿವೆ. ಎಲ್ಲ ಸಮುದಾಯದವರನ್ನೂ ಓಲೈಸಲು ಒಂದೊಂದು ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕಾಗುತ್ತದೇನೊ? ಇಂತಹ ಪ್ರಾಧಿಕಾರಗಳ ರಚನೆಯಿಂದ ಸರ್ಕಾರಕ್ಕೆ ಅನವಶ್ಯಕ ಹೊರೆಯಷ್ಟೆ. ಸಮುದಾಯಕ್ಕೊಂದು ಸಮುದಾಯ ಭವನ ಸಾಕು, ಆದರೆ ಪ್ರಾಧಿಕಾರ ಬೇಕೇ?

-ಆರ್.ಟಿ.ವೆಂಕಟೇಶ್ ಬಾಬು,ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT