ADVERTISEMENT

ಮನಕಲಕುವ ಸಂಗತಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 20:15 IST
Last Updated 17 ಜನವರಿ 2020, 20:15 IST

ಬೆಂಗಳೂರಿನ ಅವೆನ್ಯೂ ರಸ್ತೆಯ ಜನದಟ್ಟಣೆಯಲ್ಲಿ 3 ಮತ್ತು 4 ವರ್ಷದ ಮಕ್ಕಳಿಬ್ಬರನ್ನು ಬಿಟ್ಟು ಪೋಷಕರು ನಾಪತ್ತೆಯಾದ ವಿಷಯ ವರದಿಯಾಗಿದೆ (ಪ್ರ.ವಾ., ಜ. 13).ಇದೊಂದು ಮನಕಲಕುವ ಸಂಗತಿ. ಕೆಲವು ಮಕ್ಕಳು ವಯಸ್ಸಾದ ಪೋಷಕರನ್ನು ಸಾಕುವ ಹೊಣೆಯಿಂದ ತಪ್ಪಿಸಿಕೊಳ್ಳಲು, ಜನಸಂದಣಿ ಇರುವೆಡೆ ಅವರನ್ನು ಬಿಟ್ಟು ಬರುವ ಅಮಾನವೀಯ ಸಂಗತಿಗಳು ಆಗಾಗ್ಗೆ ವರದಿಯಾಗುವುದುಂಟು. ಆದರೆ, ಎಷ್ಟೇ ಬಡತನವಿದ್ದರೂಮಕ್ಕಳ ಪೋಷಣೆಯ ಜವಾಬ್ದಾರಿಯಿಂದ ತಪ್ಪಿಸಿ
ಕೊಳ್ಳುವ ಪೋಷಕರು ಇಲ್ಲ ಅಥವಾ ಅಪರೂಪ. ತಮಿಳುನಾಡಿನ ಸೇಲಂನಲ್ಲಿ ಮಹಿಳೆಯೊಬ್ಬರು ಮಕ್ಕಳ ಹಸಿವನ್ನು ಹೋಗಲಾಡಿಸಲು ತಮ್ಮ ತಲೆಯ ಕೂದಲನ್ನೇ ಕತ್ತರಿಸಿ ಮಾರಿದ ಸಂಗತಿ ಇತ್ತೀಚೆಗೆ ವರದಿಯಾಗಿತ್ತು. ಹೀಗಿರುವಾಗ, ಈ ಮಕ್ಕಳನ್ನು ಪೋಷಕರು ಜನಜಂಗುಳಿ
ಯಲ್ಲಿ ನಿಲ್ಲಿಸಿ ನಾಪತ್ತೆಯಾದುದು ಅತ್ಯಂತ ಅಮಾನವೀಯ.

ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT