ADVERTISEMENT

ವಾಚಕರ ವಾಣಿ: ಇರಲಿ ಆದಾಯ ಆಧಾರಿತ ಮೀಸಲಾತಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 19:30 IST
Last Updated 18 ನವೆಂಬರ್ 2020, 19:30 IST

ಮೀಸಲಾತಿಯ ಮೂಲ ಉದ್ದೇಶ ಸಮಾಜದಲ್ಲಿ ಬಡವರಿಗೆ, ಅವಕಾಶ ವಂಚಿತರಿಗೆ ಮುಖ್ಯವಾಹಿನಿಯಲ್ಲಿನ ಇತರ ಜನವರ್ಗದೊಂದಿಗೆ ಸರಿ ಸಮಾನವಾಗಿ ಬಾಳುವ ಅವಕಾಶ ಮಾಡಿಕೊಡುವುದು. ಶಿಕ್ಷಣದಿಂದ ಹಿಡಿದು ನೌಕರಿಯವರೆಗೆ ಎಲ್ಲ ಕ್ಷೇತ್ರಗಳಲ್ಲಿಯೂ ಈ ಮೀಸಲಾತಿ ಇದೆ. ಜಾತಿ ಆಧಾರಿತ ಮೀಸಲಾತಿ ಬದಲು ಆದಾಯ ಆಧಾರಿತ ಮೀಸಲಾತಿ ತಂದಾಗ ಮಾತ್ರ ದೇಶದಲ್ಲಿನ ಸಾಮಾಜಿಕ ಅಂತರವನ್ನು ಕಡಿಮೆ ಮಾಡಲು ಸಾಧ್ಯ. ಮೀಸಲಾತಿಯ ಸಲುವಾಗಿ ಹೊಸ ಹೊಸ ನಿಗಮಗಳ ಸ್ಥಾಪನೆ ಹಾಗೂ ಮತದಾರರ ಓಲೈಕೆಗಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸುವುದರಿಂದ ಸಮಾಜಕ್ಕೆ ಯಾವ ಪ್ರಯೋಜನವೂ ಇಲ್ಲ. ಬದಲಾಗಿ ಜನರ ಮನಸ್ಸಿನಲ್ಲಿ ಜಾತಿಯ ಬಗ್ಗೆ ಇನ್ನಷ್ಟು ಪ್ರೀತಿ ಹುಟ್ಟಿ, ಜಾತಿ– ಮತದ ಬಗೆಹರಿಯಲಾಗದ ಅನುಪಯುಕ್ತ ಒಳ-ಜಗಳಗಳಿಗೆ ಕಾರಣವಾಗುತ್ತದೆ. ಹಾಗಾಗಿ ಜಾತಿ ಆಧಾರಿತ ಮೀಸಲಾತಿಯನ್ನು ಬಿಟ್ಟು ಆದಾಯ ಆಧಾರಿತ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತಂದಾಗ ಮಾತ್ರ ಸಾಮಾಜಿನ ಸಮಾನತೆ ಸಾಧ್ಯ.

-ಲಕ್ಷ್ಮೀಕಾಂತ ಪಾಟೀಲ,ಚೋರಗಿ, ಇಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT