ADVERTISEMENT

ವಾಚಕರ ವಾಣಿ | ಅಶಾಂತಿ ಸೃಷ್ಟಿಯಿಂದ ದುಷ್ಕರ್ಮಿಗಳಿಗೆ ನೆರವು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 12 ಜೂನ್ 2022, 20:00 IST
Last Updated 12 ಜೂನ್ 2022, 20:00 IST

ಧಾರ್ಮಿಕ ನಿಂದನೆ ಹಾಗೂ ಈ ಸಂಬಂಧದ ಪ್ರತಿಭಟನೆಗಳು ಇತ್ತೀಚೆಗೆ ಹಿಂಸಾರೂಪ ಪಡೆದದ್ದು ಆತಂಕಕಾರಿ ಬೆಳವಣಿಗೆ. ದೇಶದ ಎಲ್ಲ ಧಾರ್ಮಿಕರಿಗೂ ಸಂವಿಧಾನವು ಸಮಾನತೆಯ ಹಕ್ಕು ನೀಡಿದೆ. ಆದರೆ, ಕೆಲ ವಿಕಾರ ಮನಸ್ಸಿನ ವ್ಯಕ್ತಿಗಳ ವಿವಾದಿತ ಹೇಳಿಕೆ ಹಾಗೂ ವಿವಾದಿತ ಕೃತ್ಯಗಳು ದೇಶದ ಶಾಂತಿ, ಸುವ್ಯವಸ್ಥೆ ಹಾಳುಮಾಡುತ್ತಿರುವುದು ಆತಂಕಕಾರಿ ಹಾಗೂ ಮುಂದಿನ ಪೀಳಿಗೆಗೆ ಮಾರಕ.

ಈ ಬಗೆಯ ಬೆಳವಣಿಗೆಗಳನ್ನು ಮತ್ತು ಜನರ ಧಾರ್ಮಿಕ ಭಾವನೆಗಳನ್ನು ನಮ್ಮ ರಾಜಕೀಯ ಪಕ್ಷಗಳು ಹಾಗೂ ನಾಯಕರು ಸಂಪೂರ್ಣವಾಗಿ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಎಲ್ಲರಿಗೂ ಗೊತ್ತಿದೆ. ಹೀಗಿದ್ದರೂ ಪ್ರತಿಭಟನೆಯ ನೆಪದಲ್ಲಿ ಗಲಭೆ, ಅಶಾಂತಿ ಸೃಷ್ಟಿಸಿದರೆ ರಾಜಕೀಯ ಮಾಡುವವರ ಕೈಗೆ ಒಂದು ಅಸ್ತ್ರ ಕೊಟ್ಟಂತಾಗುತ್ತದೆ. ಈ ಕುತಂತ್ರದಿಂದ, ನಮ್ಮ ಪ್ರತಿಭಟನೆಗಳು ನಮ್ಮ ಬೇಡಿಕೆ ಈಡೇರಿಸುವ ಬದಲು, ಗಲಭೆ, ಅಶಾಂತಿಯ ರೂಪ ಪಡೆದು ನಮ್ಮ ಹಾಗೂ ನಮ್ಮ ಅವಲಂಬಿತರ ಅತ್ಯಮೂಲ್ಯ ಜೀವನವನ್ನು ನರಕವಾಗಿಸುವುದಂತೂ ನಿಜ.

-ಹುಸೇನಬಾಷಾ, ತಳೇವಾಡ, ಧಾರವಾಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.