ADVERTISEMENT

ವಾಚಕರ ವಾಣಿ | ಬೆಳೆಹಾನಿ: ರೈತರ ಕಷ್ಟಕ್ಕೆ ಸ್ಪಂದಿಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 5 ಆಗಸ್ಟ್ 2022, 21:15 IST
Last Updated 5 ಆಗಸ್ಟ್ 2022, 21:15 IST

ಮಳೆ ವಿಪರೀತ ಆಗಿರುವುದರಿಂದ ರಾಜ್ಯದ ಅನೇಕ ಕಡೆ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ ಆಗಿದೆ. ಕಷ್ಟಪಟ್ಟು ಬೆಳೆದ ಬೆಳೆ ಮಳೆಗೆ ಆಹುತಿಯಾದರೆ ರೈತನ ಪಾಡು ಹೇಳತೀರದು. ಸಾಲ ಬೆನ್ನೇರುತ್ತದೆ. ಅದರಿಂದ ಹೊರಬರಲು ವರ್ಷಗಳೇ ಕಾಯಬೇಕಾಗುತ್ತದೆ. ಬೆಳೆನಷ್ಟ ಸಮೀಕ್ಷೆಯನ್ನು ತಕ್ಷಣ ಪೂರೈಸಿ, ಪರಿಹಾರ ವಿತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.

ಚುನಾವಣೆ ಸಂದರ್ಭದಲ್ಲಿ ಆಡಳಿತಾರೂಢ ಬಿಜೆಪಿ ಮುಖಂಡರು ‘ಡಬಲ್‌ ಎಂಜಿನ್‌’ ಸರ್ಕಾರದ ಬಗ್ಗೆ ಪದೇ ಪದೇ ಹೇಳುತ್ತಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ನೇತೃತ್ವದ ಸರ್ಕಾರ ಇದ್ದರೆ ಆಗುವ ಪ್ರಯೋಜನ ಏನು ಎಂಬುದನ್ನು ಇಂತಹ ಕಷ್ಟದ ಸಂದರ್ಭದಲ್ಲಾದರೂ ತೋರಿಸಬೇಕು. ಬರೀ ಮಾತು, ಘೋಷಣೆಗಳಿಂದ ಜನರಿಗೆ ಪ್ರಯೋಜನ ಇಲ್ಲ. ಹೆಚ್ಚಿನ ನೆರವು ಪಡೆಯಲು ಮುಖ್ಯಮಂತ್ರಿಯವರು ಕೇಂದ್ರದ ಮೇಲೆ ಒತ್ತಡ ಹೇರಬೇಕು.

-ಜಿ.ಎಚ್‌. ಹಿರೇಮಠ, ಬೆಳಗಾವಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.