ADVERTISEMENT

ದೇವರನ್ನು ನಂಬುವುದು ಅಂಧಶ್ರದ್ಧೆಯಲ್ಲ

​ಪ್ರಜಾವಾಣಿ ವಾರ್ತೆ
Published 26 ಜುಲೈ 2019, 19:45 IST
Last Updated 26 ಜುಲೈ 2019, 19:45 IST

ವಿಜ್ಞಾನಿಗಳು ತಮ್ಮ ಯೋಜನೆಗಳ ಯಶಸ್ಸಿಗಾಗಿ ಪ್ರಾರ್ಥಿಸಲು ದೇವಸ್ಥಾನಗಳಿಗೆ ಭೇಟಿ ನೀಡುವುದನ್ನು ಪ್ರೊ.ಎಂ. ಅಬ್ದುಲ್‌ ರೆಹಮಾನ್‌ ಪಾಷ ಆಕ್ಷೇಪಿಸಿದ್ದಾರೆ (ಸಂಗತ, ಜುಲೈ 24).

ವಿಶ್ವದಲ್ಲಿ ನಮಗಿಂತ ಹೆಚ್ಚಿನ ಶಕ್ತಿ ಯೊಂದು ಇದೆ. ಹೀಗಾಗಿಯೇ, ನಾವು ಎಷ್ಟೇ ಪ್ರಯತ್ನಪಟ್ಟರೂ ಎಲ್ಲವೂ ಸರಿಯಾಗಿದ್ದರೂ ಕೆಲವೊಮ್ಮೆ ನಮ್ಮ ಕೈ ಮೀರಿ ಘಟನೆಗಳು ಜರುಗುತ್ತವೆ. ಅದಕ್ಕೇ ನಾವು ಆ ಶಕ್ತಿಯನ್ನು ದೇವರೆಂದು ನಂಬಿ ಪ್ರಾರ್ಥಿಸುವುದು. ಇದರಲ್ಲಿ ತಪ್ಪೇನಿದೆ? ಈ ಜಗತ್ತಿನಲ್ಲಿ ಎಷ್ಟು ವಿಷಯಗಳು ನಂಬಿಕೆಯ ಮೇಲೆ ನಡೆಯುತ್ತಿಲ್ಲ? ವಿಜ್ಞಾನಿಗಳೂ ಮನುಷ್ಯರೇ ಅಲ್ಲವೇ? ಇದಕ್ಕೆಲ್ಲ ಮತ್ತೊಂದು ಅರ್ಥ ಹುಡುಕುವುದು ಏಕೆ? ಪೂಜೆ, ಪ್ರಾರ್ಥನೆ ಅವರವರ ನಂಬಿಕೆ.

ಒಂದು ಕಾರ್ಯ ಯಶಸ್ವಿಯಾದರೆ, ಅದನ್ನು ದೇವರಿಗೆ ಸಮರ್ಪಿಸಿದರೆ ನಿಸ್ವಾರ್ಥ ಭಾವನೆ ಬರುವುದಲ್ಲವೇ? ಇಂಥ ಗುಣಗಳನ್ನು ಬೆಳೆಸುವ ದೇವರ ಮೇಲಿನ ನಂಬಿಕೆ ಮತ್ತು ವಿಶ್ವಾಸವು ಅಂಧಶ್ರದ್ಧೆ ಹೇಗಾಗುತ್ತದೆ?

ADVERTISEMENT

- ಸ್ಮಿತಾ ಮೈಸೂರ್, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.