ADVERTISEMENT

ವಾಚಕರ ವಾಣಿ: ಪ್ರಾದೇಶಿಕ ಭಾಷೆಗಳಿಗೆ ಬೇಕು ಎಚ್ಚರ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 19:30 IST
Last Updated 2 ಜೂನ್ 2022, 19:30 IST

ಬಿಜೆಪಿ ತಮಿಳು ವಿರೋಧಿ ಎಂದು ಹೇಳಿರುವ ಎಐಎಡಿಎಂಕೆ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಗಿಂತಲೂ ಈಗ ಹೆಚ್ಚು ಹಿಂದಿ ಹೇರಿಕೆಯಾಗುತ್ತಿದೆ ಎಂದು ಹೇಳಿದೆ (ಪ್ರ.ವಾ., ಜೂನ್ 2). ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಬರೀ ತಮಿಳು ವಿರೋಧಿಗಳಷ್ಟೇ ಅಲ್ಲ, ಅವು ಎಲ್ಲಾ ಪ್ರಾದೇಶಿಕ ಭಾಷಾ ವಿರೋಧಿಗಳೂ ಆಗಿವೆ. ಈ ಎರಡೂ ಪಕ್ಷಗಳು ಎಲ್ಲ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆ ಮಾಡಿವೆ. ಈ ಎಚ್ಚರ ನಮ್ಮ ದೇಶದ ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಇರಬೇಕು. ಏಕೆಂದರೆ ನಮಗೆಲ್ಲರಿಗೆ ಶಿಕ್ಷಣ ಬಹಳ ಮುಖ್ಯ. ಆದರೆ ಅಲ್ಲಿಯೇ ಹಿಂದಿ ಭಾಷೆ ಹೇರಿಕೆಯಾದರೆ ನಮ್ಮ ಮಕ್ಕಳ ಶಿಕ್ಷಣ ಕುಂಠಿತಗೊಳ್ಳುತ್ತದೆ. ನಮ್ಮ ಸಂವಿಧಾನ ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ರಾಷ್ಟ್ರಭಾಷೆಗಳೆಂದೇ ಹೇಳಿದೆ. ಆದರೆ ಹಿಂದಿ ಭಾಷಿಕರ ರಾಜಕೀಯದಿಂದಾಗಿ ಹಿಂದಿ ಹೇರಿಕೆ ಆಗಾಗ ಕಾಣಿಸಿಕೊಳ್ಳುತ್ತದೆ. ಅಂಥ ಸಂದರ್ಭದಲ್ಲಿ ನಮ್ಮ ಮಾತೃಭಾಷೆಯನ್ನು ಉಳಿಸಿ ಬೆಳೆಸುವ ಹೊಣೆ ನಮ್ಮೆಲ್ಲರದಾಗಿದೆ. ಈ ಹಿನ್ನೆಲೆಯಲ್ಲಿ ಎಐಎಡಿಎಂಕೆ ವಹಿಸಿರುವ ಎಚ್ಚರವನ್ನು ಕನ್ನಡಿಗರೂ
ಅರ್ಥಮಾಡಿಕೊಳ್ಳಬೇಕಿದೆ.

- ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT