ADVERTISEMENT

ಸತ್ವ ಪರೀಕ್ಷೆಯ ಕಾಲ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 4:31 IST
Last Updated 11 ಜೂನ್ 2019, 4:31 IST

ಬಲಪಂಥೀಯ ಚಿಂತನೆಗಳ ಪ್ರಬಲ ಸಮರ್ಥಕರಾದ ನನ್ನ ಸಹೋದ್ಯೋಗಿ ಸನ್ಮಿತ್ರರೊಬ್ಬರು, ರಂಜಾನ್‌ನ ಮರುದಿನ ಬೆಳಿಗ್ಗೆ ನನ್ನ ಮುಖ ನೋಡುತ್ತಲೇ ‘ಏನು, ನಿನ್ನೆ ಹಬ್ಬ ಜೋರಾ’ ಎಂದು ಪ್ರಶ್ನಿಸಿದರು. ‘ಹ್ಞಾಂ, ತುಂಬಾ ಜೋರು’ ಎಂದು ನಗುತ್ತಲೇ ಉತ್ತರಿಸಿದೆ.

ದೇವರ ಅಸ್ತಿತ್ವದ ಬಗ್ಗೆ ನಂಬಿಕೆ ಇಡದ, ಯಾವುದೇ ಜಾತಿ, ಪಂಥ, ಧರ್ಮದ ಕಟ್ಟುಪಾಡುಗಳಿಗೆ ಜೋತು ಬೀಳದ ಹಾಗೂ ಯಾವುದೇ ಹಬ್ಬ ಹರಿದಿನಗಳನ್ನು ಆಚರಿಸದ ನನ್ನ ಅಚಲ ನಿಲುವಿನ ಬಗ್ಗೆ ಅರಿವಿದ್ದೂ ಅವರು ಹೀಗೆ ಪ್ರಶ್ನಿಸಿದರು. ಬಲಪಂಥೀಯ ಚಿಂತನೆಗಳು ಮುನ್ನೆಲೆಗೆ ಬಂದಿರುವ ಈಗಿನ ಸಂದರ್ಭವು ನನ್ನಂತೆ ಯೋಚಿಸುವವರೆಲ್ಲರಿಗೂ ಸತ್ವಪರೀಕ್ಷೆಯ ಕಾಲ. ಏಕೆಂದರೆ, ಜಾತಿ, ಧರ್ಮ, ದೇವರ ಗೊಡವೆಯೇ ಬೇಡವೆಂದರೂ ‘ನಾವು ನಂಬಿದ್ದನ್ನು ನೀವೂ ನಂಬಿದರೆ ನೀವು ಭಾರತೀಯರು, ಇಲ್ಲದಿದ್ದರೆ ನೀವು ಮುಸ್ಲಿಮರು, ಪಾಕಿಸ್ತಾನದವರು’ ಎಂದು ಹಣೆಪಟ್ಟಿ ಕಟ್ಟುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗಾಗಿ ‘ನೂರು ದೇವರನೆಲ್ಲ ನೂಕಾಚೆ ದೂರ, ಭಾರತಾಂಬೆಯೇ ದೇವಿ, ಪೂಜಿಸುವಾ ಬಾರಾ ಬಾರಾ’ ಎಂಬ ಕುವೆಂಪು ವಾಣಿ ಹಿಂದಿಗಿಂತ ಇಂದು ಹೆಚ್ಚು ಪ್ರಸ್ತುತವಾಗಿದೆ.

ಎಚ್.ಎಸ್.ನಂದಕುಮಾರ್,ಮಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.