ADVERTISEMENT

ಈಡುಗಾಯಿಗೇ ಈಡಾಯಿತು ರಸ್ತೆ!

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 19:45 IST
Last Updated 5 ಡಿಸೆಂಬರ್ 2021, 19:45 IST

ಉತ್ತರಪ್ರದೇಶದ ಬಿಜನೋರ್‌ನಲ್ಲಿ ಸುಮಾರು ₹ 1.16 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ರಸ್ತೆಯೊಂದು ಉದ್ಘಾಟನಾ ಸಮಯದಲ್ಲಿ ತೆಂಗಿನಕಾಯಿ ಒಡೆದಾಗ ಬಿರುಕುಬಿಟ್ಟಿರುವ ಸಂಗತಿ ವರದಿಯಾಗಿದೆ. ಈಡುಗಾಯಿಗೆ ರಸ್ತೆಯೇ ಈಡಾಯಿತು ಎಂದರೆ ಅದೆಷ್ಟು ಕಳಪೆ ಕಾಮಗಾರಿ ಎಂದು ಊಹಿಸಿಕೊಳ್ಳಬಹುದು.

ಗುತ್ತಿಗೆದಾರನಿಂದ ಹಿಡಿದು ಮೇಲಿನ ಹಂತದವರೆಗಿನ ಎಲ್ಲರೂ ಕಾಮಗಾರಿಯ ಹಣವನ್ನು ನೆಕ್ಕಿ ಸವಿದವರೇ ಆಗಿರುತ್ತಾರೆ. ಈ ರೀತಿ ತಿಂದು ಬದುಕಲು ಅಸಹ್ಯವೆನಿಸದೇ? ಇಂತಹವರಿಂದ ಯಾವ ರೀತಿ ಜನಸೇವೆಯನ್ನು ನಿರೀಕ್ಷಿಸಲು ಸಾಧ್ಯ?

- ಪತ್ತಂಗಿ ಎಸ್. ಮುರಳಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.