ADVERTISEMENT

ಸೀಟುಗಳಿಗೆ ಮಿತಿ ಹಾಕುವುದು ಸಲ್ಲದು

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 16:46 IST
Last Updated 7 ಜೂನ್ 2019, 16:46 IST

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಪ್ರಾರಂಭಿಸುವ ಸುದ್ದಿಯು ಪೋಷಕರಲ್ಲಿ ಆಶಾಭಾವ ಮೂಡಿಸಿದೆ. ಆದರೆ, ಇದೀಗ ಶಿಕ್ಷಣ ಇಲಾಖೆಯು ಪ್ರವೇಶಾವಕಾಶವನ್ನು 30 ಸೀಟುಗಳಿಗೆ ಮಿತಿಗೊಳಿಸಲು ಮುಂದಾಗಿರುವುದು ಸೀಟು ಸಿಗುವುದರ ಬಗ್ಗೆ ಅನುಮಾನ ಮೂಡಿಸಿದೆ. ಸರ್ಕಾರಿ ಶಾಲೆಗಳು ಇಲ್ಲದ ಪ್ರದೇಶದಲ್ಲಿ ಮಾತ್ರ ಆರ್‌ಟಿಇ ಸೀಟುಗಳನ್ನು ನೀಡಬೇಕೆಂದು ಈಚೆಗೆ ಸರ್ಕಾರವೇ ಹೇಳಿದೆ.

ಈಗ ಇಂಗ್ಲಿಷ್‌ ಮಾಧ್ಯಮ ತರಗತಿಗಳ ಪ್ರವೇಶಾವಕಾಶಕ್ಕೆ ಮಿತಿ ವಿಧಿಸಿರುವುದು ಗಾಯದ ಮೇಲೆ ಬರೆ ಎಳೆದಂತಿದೆ. ಸೀಟು ಸಿಗದ ಪೋಷಕರು ಅನಿವಾರ್ಯವಾಗಿ, ದುಬಾರಿ ಶುಲ್ಕ ಪಡೆಯುವ ಖಾಸಗಿ ಶಾಲೆಗಳ ಬಾಗಿಲು ಬಡಿಯಬೇಕಾಗುತ್ತದೆ.

ಸಂದೀಪ್ ಕೆ.,ಮಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.