ADVERTISEMENT

ತಟಸ್ಥ ನಿಲುವು ತಂದ ಲಾಭ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 3 ಏಪ್ರಿಲ್ 2022, 19:31 IST
Last Updated 3 ಏಪ್ರಿಲ್ 2022, 19:31 IST

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾದಾಗ ಪಶ್ಚಿಮದ ರಾಷ್ಟ್ರಗಳು ಭಾರತದ ನಿಲುವನ್ನು ಸ್ಪಷ್ಟಪಡಿಸಲು ಒತ್ತಡ ಹೇರಿದ್ದವು. ಭಾರತ ಮಾತ್ರ ತಟಸ್ಥ ನಿಲುವನ್ನು ವ್ಯಕ್ತಪಡಿಸಿದಾಗ, ನಮ್ಮೊಳಗಿನ ಒಂದಷ್ಟು ಜನ ಕೂಡ ಸರ್ಕಾರದ ನಿಲುವನ್ನು ಟೀಕಿಸಿದ್ದರು. ಹಿಂದೆ ಬಲಿಷ್ಠ ರಾಷ್ಟ್ರಗಳ ನೆರವು ಕೇಳುತ್ತಿದ್ದ ಭಾರತ ಈಗ ಬೆಳೆದು ನಿಂತಿರುವ ಪರಿ ನೋಡಿದರೆ, ನಮ್ಮ ನೆರವಿನ ಅನಿವಾರ್ಯ ಬಲಿಷ್ಠ ರಾಷ್ಟ್ರಗಳಿಗಿದೆ ಎಂಬುದು ತಿಳಿಯುತ್ತದೆ. ರಷ್ಯಾ, ಅಮೆರಿಕಗಳೆರಡೂ ಭಾರತದ ಸ್ನೇಹಕ್ಕಾಗಿ ಪೈಪೋಟಿ ನಡೆಸುತ್ತಾ, ಬೇಕಾದ್ದನ್ನು ಕೊಡುವ ಮಾತನಾಡುವುದು ನೋಡಿದರೆ, ಅಂತರರಾಷ್ಟ್ರೀಯ ಸಂಬಂಧಗಳು ಲಾಭಕ್ಕಾಗಿ ರಚಿತಗೊಂಡಿರುತ್ತವೆ ಎನ್ನುವ ಮಾತು ನಿಜವೆನಿಸುತ್ತದೆ.

- ಪುನೀತ್ ಕುಮಾರ್,ಸುಳ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT