ADVERTISEMENT

ಕ್ರೂರವಾದ ಹಾಸ್ಯ

ನಡಹಳ್ಳಿ ವಂಸತ್‌
Published 1 ಮೇ 2019, 18:30 IST
Last Updated 1 ಮೇ 2019, 18:30 IST

ಪತಿ–ಪತ್ನಿ ನಡುವೆ ಒಪ್ಪಿಗೆಯಿಲ್ಲದೆ ಬಲವಂತದಿಂದ ನಡೆಯುವ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ಎಂದು ಪರಿಗಣಿಸುವ ಕಾನೂನು ಜಾರಿಯಾದರೆ, ರಿಜಿಸ್ಟರ್‌ನಲ್ಲಿ ಪತ್ನಿಯ ಸಹಿ ಪಡೆದು ಅವಳನ್ನು ಮುಟ್ಟಬೇಕಾದ ಪರಿಸ್ಥಿತಿ ಬರಬಹುದು ಎಂದು ಎಸ್.ಎಲ್. ಭೈರಪ್ಪನವರು ಚಟಾಕಿ ಹಾರಿಸಿದ್ದಾರೆ. ಇದು, ಬಹಳ ಕ್ರೂರವಾದ ಹಾಸ್ಯ. ಪತ್ನಿಯ ದೇಹವು ಪತಿಯ ಆಸ್ತಿ ಎನ್ನುವ ಚಿಂತನೆಯಿಂದ ಬಂದಂತಹ ಹಾಸ್ಯ. ಒಪ್ಪಿಗೆಯಿಲ್ಲದಿದ್ದಾಗ ಪತ್ನಿಯ ಮೇಲೆ ಲೈಂಗಿಕ ದಬ್ಬಾಳಿಕೆ ನಡೆಸುವುದು ದಾಂಪತ್ಯಧರ್ಮ ಹೇಗಾಗುತ್ತದೆ?

ಇಲ್ಲಿ, ಒಂದು ವಿರೋಧಾಭಾಸವಿದೆ. ಸಹಜ ದಾಂಪತ್ಯದಲ್ಲಿ ಪತಿಯು ಪತ್ನಿಯ ಮೇಲೆ ದಬ್ಬಾಳಿಕೆ ನಡೆಸುವುದಿಲ್ಲ. ಪತ್ನಿಯು ಪತಿಯ ಮೇಲೆ ಲೈಂಗಿಕ ಹಿಂಸಾಚಾರದ ದೂರು ನೀಡುವ ಪರಿಸ್ಥಿತಿ ಬರುವುದೆಂದರೆ, ದಾಂಪತ್ಯ ಜೀವನ ಹದಗೆಟ್ಟಿದೆ ಎಂದೇ ಅರ್ಥ. ಪತ್ನಿ, ಅತ್ಯಾಚಾರವೆಂದು ದೂರು ನೀಡದಿದ್ದರೂ ಕೌಟುಂಬಿಕ ಹಿಂಸೆ ಎಂದು ಪತಿಯ ಮೇಲೆ ದೂರು ನೀಡುವ ಅವಕಾಶ ಅವರಿಗೆ ಇದ್ದೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT