ADVERTISEMENT

ಪುರುಷರಷ್ಟೇ ಪಾವನರೇ?

ಕೆ.ಎನ್.ಭಗವಾನ್
Published 22 ಅಕ್ಟೋಬರ್ 2018, 20:01 IST
Last Updated 22 ಅಕ್ಟೋಬರ್ 2018, 20:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಬರಿಮಲೆಯಲ್ಲಿನ ಅಯ್ಯಪ್ಪನ ದರ್ಶನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ, ಕೆಲವು ಮಹಿಳೆಯರೇ ಮಹಿಳೆಯರಿಗೆ ತಡೆಯೊಡ್ಡುತ್ತಿದ್ದಾರೆ.

‘ಅಯ್ಯಪ್ಪನ ದರ್ಶನ ಪಡೆಯಬೇಕಾದರೆ ಭಕ್ತರು ಕಠೋರ ನಿಯಮಗಳನ್ನು ಪಾಲಿಸಬೇಕಾಗುತ್ತದೆ, ಕಪ್ಪು ಬಟ್ಟೆಯನ್ನು ಧರಿಸಬೇಕು, ಮಡದಿ– ತಾಯಿಯಿಂದಲೂ ದೂರವಿರಬೇಕು, ತಾವೇ ಆಹಾರ ತಯಾರಿಸಿ ತಿನ್ನಬೇಕು... ಎಂಬ ಮುಂತಾದ ಹಲವು ನಿಯಮಗಳಿವೆ’ ಎಂದು ವಾದಿಸಲಾಗುತ್ತಿದೆ.

ಆದರೆ, ಶಬರಿಮಲೆಗೆ ಬರುವ ಪುರುಷ ಭಕ್ತರು ಈ ಎಲ್ಲ ಕಠೋರ ನಿಯಮಗಳನ್ನು ಅಕ್ಷರಶಃ ಪಾಲಿಸುತ್ತಿದ್ದಾರೆಯೇ? ಇದನ್ನು ಪರೀಕ್ಷಿಸುವವರು ಯಾರು? ನಿಯಮ ಪಾಲಿಸದ ಪುರುಷ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರಿಗೆ ಇರುವ ರಿಯಾಯಿತಿ ಮಹಿಳಾ ಭಕ್ತರಿಗಿಲ್ಲವೇಕೆ?‘ನಾವು ಹಿಂದೂ, ನಾವೆಲ್ಲಾ ಒಂದು’ ಎನ್ನುವವರು, ಪುರುಷರು– ಮಹಿಳೆಯರು ಎಂದು ಭೇದ ಭಾವ ತರುವುದೇಕೆ?

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.