ADVERTISEMENT

ತಾಯ್ತನ ಎಂಬ ಭದ್ರತಾ ಭಾವ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 17 ಆಗಸ್ಟ್ 2020, 2:29 IST
Last Updated 17 ಆಗಸ್ಟ್ 2020, 2:29 IST

ಪಶ್ಚಿಮ ಬಂಗಾಳದ ಚಹಾ ತೋಟವೊಂದರಲ್ಲಿ ಮಧ್ಯರಾತ್ರಿ ಮನೆಗೆ ನುಗ್ಗಿದ ಆನೆಯಿಂದ ಮಕ್ಕಳನ್ನು ರಕ್ಷಿಸಿದ ತಾಯಿಯ ಸುದ್ದಿ (ಪ್ರ.ವಾ., ಆ. 15) ಓದಿ ರೋಮಾಂಚನವಾಯಿತು. ಮಕ್ಕಳನ್ನು ಆನೆಯು ಸೊಂಡಿಲಿನಲ್ಲಿ ಹಿಡಿದಿದ್ದಾಗ, ಆ ಸೊಂಡಿಲನ್ನು ಮನೆಯ ತಗಡಿನ ಗೋಡೆಗೆ ಒತ್ತಿ ಹಿಡಿದು ಅದರ ಹಿಡಿತ ಸಡಿಲಿಸಿ, ತನ್ನಿಬ್ಬರು ಮಕ್ಕಳನ್ನು ನಸೀಮಾ ರಕ್ಷಿಸಿದ ಪರಿ, ಅದ್ಭುತ ಧೈರ್ಯ ಹಾಗೂ ಸಮಯಪ್ರಜ್ಞೆಗೆ ದ್ಯೋತಕ. ಹಾಗೇ ಆ ಸಂದರ್ಭದಲ್ಲಿ ಆನೆಗೆ ಗೋಧಿ ಮೂಟೆಯನ್ನು ಸರಿಸಿ, ಅದರ ಉದ್ದೇಶವನ್ನರಿತು ಆಹಾರ ನೀಡಿದ ಆಕೆಯ ವಿವೇಕವು ವನ್ಯಜೀವಿಗಳೊಂದಿಗಿನ ನಮ್ಮ ಬಾಳು ಹೇಗಿರಬೇಕು ಎಂಬುದಕ್ಕೆ ಒಂದು ನಿದರ್ಶನ. ಒಟ್ಟಾರೆ, ತಾಯ್ತನ ಕೊಡುವ ಧೈರ್ಯಕ್ಕೆ ಸರಿಸಾಟಿ ಉಂಟೇ?

ಪ್ರೊ. ಶಿವರಾಮಯ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT