ADVERTISEMENT

ವಿದ್ಯಾರ್ಥಿವೇತನ: ಅರ್ಜಿ ಸಲ್ಲಿಕೆಯೇ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 15:23 IST
Last Updated 19 ಅಕ್ಟೋಬರ್ 2021, 15:23 IST

ಶಾಲಾ ಕಾಲೇಜುಗಳ ಹಲವು ವಿದ್ಯಾರ್ಥಿವೇತನದ ಅರ್ಜಿಗಳನ್ನು ಆನ್‍ಲೈನ್‍ನಲ್ಲಿ ಕರೆಯಲಾಗಿದೆ. ಆದರೆ ಪ್ರತಿಯೊಂದು ವಿದ್ಯಾರ್ಥಿವೇತನದ ಅರ್ಜಿ ಒಂದೊಂದು ವೆಬ್‍ಸೈಟ್‍ನಲ್ಲಿ ಇದ್ದು, ವಿದ್ಯಾರ್ಥಿಯು ಮಾಹಿತಿ ಭರ್ತಿ ಮಾಡುವಾಗ ಬಹಳಷ್ಟು ಮಾಹಿತಿಯನ್ನು ತುಂಬುವುದು ಕಠಿಣವೆನಿಸುತ್ತಿದೆ.

ಎಸ್‍ಎಸ್‍ಪಿ ವಿದ್ಯಾರ್ಥಿವೇತನದ ಅರ್ಜಿ ಭರ್ತಿ ಮಾಡಲಂತೂ ಸೈಬರ್‌ ಕೇಂದ್ರದವರೂ ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಅರ್ಜಿ ಹಾಕಲು ಹೆಚ್ಚಿಗೆ ಹಣ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ ಸರ್ವರ್ ಸಮಸ್ಯೆ ಕಾಡುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಆದಕಾರಣ ಸಂಬಂಧಪಟ್ಟ ಅಧಿಕಾರಿಗಳು ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಮತ್ತು ಸರ್ವರ್‌ ಸಮಸ್ಯೆಯನ್ನು ಸರಿಪಡಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು.

ಪ್ರದೀಪ ಬಿಸಲನಾಯಿಕ,ಚಿಕ್ಕೋಡಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.