ADVERTISEMENT

ವಾಚಕರ ವಾಣಿ: ಮೊಟ್ಟೆ ಕುರಿತು ವೈಜ್ಞಾನಿಕ ಅರಿವು ಅಗತ್ಯ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 2 ಡಿಸೆಂಬರ್ 2021, 19:30 IST
Last Updated 2 ಡಿಸೆಂಬರ್ 2021, 19:30 IST

ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ವಿತರಿಸುತ್ತಿರುವುದನ್ನು ಕೆಲವು ಸಂಘಟನೆಗಳು ವಿರೋಧಿಸಿರುವುದು, ಅದಕ್ಕೆ ಪ್ರತಿಯಾಗಿ ಕೆಲವು ಸಂಘಟನೆಗಳು ಧರಣಿ ನಡೆಸಿರುವುದು ವರದಿಯಾಗಿದೆ. ಖುದ್ದು ನಾನು ಇತ್ತೀಚಿನವರೆಗೂ ಮೊಟ್ಟೆಯು ಮಾಂಸಾಹಾರಿಯೆಂದೇ ಭಾವಿಸಿದ್ದೆ. ಆದರೆ ಡಿಸ್ಕವರಿ ವಾಹಿನಿಯ ಒಂದು ಅಧಿಕೃತ ವಿಡಿಯೊ ನೋಡಿದ ಮೇಲೆ ತಿಳಿದದ್ದು ಹುಂಜ– ಕೋಳಿಯ ಮಿಲನದಿಂದ ಮಾತ್ರವೇ ಮೊಟ್ಟೆಗಳು ಉತ್ಪತ್ತಿಯಾಗದೆ, ಸರಿಯಾದ ಪೌಷ್ಟಿಕಾಂಶ ನೀಡಿದಲ್ಲಿ 19 ವಾರಗಳ ನಂತರ ಕೋಳಿ ತಾನಾಗೇ ಮೊಟ್ಟೆ ಇಡಲು ಶುರುಮಾಡುತ್ತದೆ (ಇಡೀ ಊರಲ್ಲಿ ಒಂದೂ ಹುಂಜ ಇಲ್ಲದಾಗ್ಯೂ). ಆದರೆ ಇಂಥ ಮೊಟ್ಟೆಗಳನ್ನು ಮರಿ ಮಾಡಲಾಗದು. ಆದರೂ ಪೌಷ್ಟಿಕಾಂಶದಲ್ಲಿ ಸಹಜವಾಗಿ ಹುಟ್ಟಿದ ಮೊಟ್ಟೆಗಳಿಗೂ ಇವುಗಳಿಗೂ ವ್ಯತ್ಯಾಸವಿಲ್ಲ. ಅಂದಮೇಲೆ ಇಂಥ ಮೊಟ್ಟೆಯು ಸಸ್ಯಾಹಾರಿಯೆಂದೇ ಆಯಿತಲ್ಲ. ಇದು ಮಾಂಸಾಹಾರಿ ಎಂದು ವಾದಿಸುವವರು ಹಾಲಿನಲ್ಲಿ ಕೊಬ್ಬಿನಂಶ ನಿಗದಿತ ಪ್ರಮಾಣದಲ್ಲಿ ಇಲ್ಲದಿದ್ದರೆ ಡೈರಿಯವರು ತಿರಸ್ಕರಿಸುತ್ತಾರೆ ಎಂಬುದನ್ನು ಗಮನದಲ್ಲಿ ಇಡಬೇಕು. ಹಾಗಿದ್ದ ಮೇಲೆ ನಾವು ಕುಡಿಯುವ ಕಾಫಿ–ಟೀಯಲ್ಲಿ ದನದ ಕೊಬ್ಬಿದೆ ಎಂದು ತಿಳಿಯೋಣವೆ?

-ರವಿಕಿರಣ್ ಶೇಖರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT