ADVERTISEMENT

ವಾಚಕರ ವಾಣಿ: ಜನರ ಹಾದಿ ತಪ್ಪಿಸುವ ಹೇಳಿಕೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 23 ಫೆಬ್ರುವರಿ 2022, 19:31 IST
Last Updated 23 ಫೆಬ್ರುವರಿ 2022, 19:31 IST

‘ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳನ್ನು ಎನ್‌ಕೌಂಟರ್ ಮಾಡಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೇಳಿರುವುದಾಗಿ ವರದಿಯಾಗಿದೆ. ಒಂದು ರಾಷ್ಟ್ರೀಯ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಅವರು ಇಂಥ ಮಾತನ್ನು ಹೇಳಬಾರದಾಗಿತ್ತು. ಯಾವುದೇ ಕೊಲೆ ಪ್ರಕರಣದ ಆರೋಪಿಗಳು ‘ಅಪರಾಧಿಗಳು’ ಎಂದು ಸಾಬೀತಾಗುವುದು ನ್ಯಾಯಾಲಯದ ತೀರ್ಪು ಹೊರಬಂದ ಮೇಲೆಯೇ ಎಂಬ ಸಾಮಾನ್ಯ ಜ್ಞಾನ ಆಡಳಿತ ಪಕ್ಷದ ಅಧ್ಯಕ್ಷರಿಗೆ ಇಲ್ಲವೇ? ಇಷ್ಟಕ್ಕೂ ಅವರ ಪಕ್ಷದ ನೇತೃತ್ವದ ಸರ್ಕಾರವೇ ಎರಡೂ ಕಡೆ ಇರುವುದರಿಂದ ಒತ್ತಡ ತಂದು ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿ, ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ಮಾಡುವುದನ್ನು ಯಾರು ಬೇಡ ಎನ್ನುತ್ತಾರೆ? ಅದು ಬಿಟ್ಟು ಜನರನ್ನು ಹಾದಿ ತಪ್ಪಿಸುವಂಥ ಹೇಳಿಕೆ ಕೊಡುವುದು ಎಷ್ಟು ಸರಿ?

-ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರ್, ಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT